<ಗದುಗಿನ ಭಾರತ ಪದಕೋಶ
ಹ - ಹ
 1.		ಸ್ವೇದಜಲ, ಬೆವರು, ಭೀಷ್ಮ ಪರ್ವ,3,4
 2.		ಹಂಗ, ಶಕುನ ಪಕ್ಷಿ, ಉದ್ಯೋಗ ಪರ್ವ,1,18
 3.		ಹಂಗ, ಕಳಿಂಗ ಪಕ್ಷಿ, ಸಭಾ ಪರ್ವ,13,2
 4.		ಹಂಗನ ಗರಿ, ಶಕುನದ ಪಕ್ಷಿಯ ಗರಿ, ದ್ರೋಣ ಪರ್ವ,5,13
 5.		ಹಂಗಿಗ, ದಾಕ್ಷಿಣ್ಯಕ್ಕೆ ಒಳಗಾದವನು, ವಿರಾಟ ಪರ್ವ,9,29
 6.		ಹಂಗಿಗರು, ಋಣಿಗಳು, ವಿರಾಟ ಪರ್ವ,8,8
 7.		ಹಂಗಿನ, ಋಣದ, ಭೀಷ್ಮ ಪರ್ವ,9,42
 8.		ಹಂಗು, ದಾಕ್ಷಿಣ್ಯ., ಉದ್ಯೋಗ ಪರ್ವ,5,7
 9.		ಹಂಜರಕೂಳಿ, ಮೀನು ಹಿಡಿಯುವ ಬುಟ್ಟಿ, ಕರ್ಣ ಪರ್ವ,22,28
 10.		ಹಂತಿ, ಪಂಕ್ತಿ, ಕರ್ಣ ಪರ್ವ,4,22
 11.		ಹಂತಿಕಾರ, ಸಾಲಿನಲ್ಲಿ ನಿಲ್ಲುವವನು, ಕರ್ಣ ಪರ್ವ,22,26
 12.		ಹಂತಿಯ ಕೂಳು, ಸಾಲಿನಲ್ಲಿ ಕುಳಿತು ಮಾಡುವ ಊಟ, ಗದಾ ಪರ್ವ,11,54
 13.		ಹಂಬಲಿಸು, ಉತ್ಕಟವಾಗಿ ಆಶಿಸು, ಆದಿ ಪರ್ವ,8,42
 14.		ಹಂಸ ಡಿಬಿಕರ ಪೌಂಡ್ರಕರ, ಹಂಸ , ಸಭಾ ಪರ್ವ,2,24, 
 15.		ಹಂಸಗಳ ತೂಳ, ತುಪ್ಪಳದಿಂದ ಮಾಡಿದ ಮೃದು ಹಾಸಿಗೆ, ಗದಾ ಪರ್ವ,3,21
 16.		ಹಂಸತೂಳ, ಹಂಸತೂಲಿಕಾತಲ್ಪ, ಗದಾ ಪರ್ವ,3,21
 17.		ಹಂಸತ್ವ, ಮೋಕ್ಷ, ಸಭಾ ಪರ್ವ,9,24
 18.		ಹಕ್ಕರಿಕೆ, ಪಕ್ಕ ರಕ್ಷೆ, ಗದಾ ಪರ್ವ,3,13
 19.		ಹಕ್ಕರಿಕೆ, ಆನೆ ಕುದುರೆಗಳನ್ನು ರಕ್ಷಿಸುವ ಸಾಧನ, ದ್ರೋಣ ಪರ್ವ,8,45
 20.		ಹಕ್ಕರಿಕೆ, ಕುದುರೆಯ ಜೇನು, ದ್ರೋಣ ಪರ್ವ,15,18
 21.		ಹಕ್ಕರಿಕೆ, ಕುದುರೆಯ ಹಲ್ಲಣ (ಪಕ್ಷರಕ್ಷ, ಶಲ್ಯ ಪರ್ವ,2,33
 22.		ಹಕ್ಕರಿಕೆ, ಕುದುರೆಗಳನ್ನು ರಕ್ಷಿಸುವ ಸಾಧನÉ, ಗದಾ ಪರ್ವ,1,16
 23.		ಹಕ್ಕರಿಕೆ, ಗುಳ, ಭೀಷ್ಮ ಪರ್ವ,5,37
 24.		ಹಕ್ಕಲಾಗು, ನಿರ್ಜನವಾಗು, ಭೀಷ್ಮ ಪರ್ವ,4,43
 25.		ಹಕ್ಕಲಾದವರು, ಚದುರಿದವರು, ದ್ರೋಣ ಪರ್ವ,13,45
 26.		ಹಕ್ಕಲು, ಬೆಳೆಕೊಯ್ದಿರುವ ಜಮೀನು, ಶಲ್ಯ ಪರ್ವ,1,26
 27.		ಹಕ್ಕಲು, ಬೆಳೆಕೊಯ್ದ, ಗದಾ ಪರ್ವ,1,67
 28.		ಹಕ್ಕೆ, ಹಾಸಿಗೆ, ಉದ್ಯೋಗ ಪರ್ವ,9,35
 29.		ಹಗರಣ, ನಿಂದೆ, ಗದಾ ಪರ್ವ,11,40
 30.		ಹಗರು, ಹುರುಪು, ದ್ರೋಣ ಪರ್ವ,1,42
 31.		ಹಗಲ ಹೂಳಿದರು, ಬಾಣದ ಮಳೆಯಿಂದ ಕತ್ತಲೆ ಉಂಟು ಮಾಡಿದರು, ಭೀಷ್ಮ ಪರ್ವ,4,99
 32.		ಹಗಲುಳುಕು, ಹಗಲಿನಲ್ಲಿ ನಡುಕ, ಗದಾ ಪರ್ವ,8,4
 33.		ಹಗಿನ, ಮರದಲ್ಲಿ ಜಿನುಗುವ ಅಂಟು, ಸಭಾ ಪರ್ವ,10,47
 34.		ಹಗೆ, ಶತ್ರುತ್ವ, ಗದಾ ಪರ್ವ,11,40
 35.		ಹಗೆ, ಶತ್ರುತ್ವ, ಗದಾ ಪರ್ವ,5,29
 36.		ಹಗೆಬೆಳೆದ, ವೈರತ್ವ ಬೆ, ಗದಾ ಪರ್ವ,12,2
 37.		ಹಗೆಯಾದವರು, ಶತ್ರುಗಳಾಗಿದ್ದವರು, ಸಭಾ ಪರ್ವ,2,67
 38.		ಬಾಹೆ, ಹೊರಗೆ, ಶಲ್ಯ ಪರ್ವ,2,9
 39.		ಹಚ್ಚಿಕೊಟ್ಟನು, ತಂದುಕೊಟ್ಟನು, ಭೀಷ್ಮ ಪರ್ವ,6,46
 40.		ಹಜ್ಜೆಯನು ಇತ್ತು ತೆಗೆವg, ಹೆಜ್ಜೆ ಮುಂದಿಟ್ಟು ಹಿಂದಕ್ಕೆ ಸರಿವರೆ, ಭೀಷ್ಮ ಪರ್ವ,9,6
 41.		ಹಡಪ, ತಾಂಬೂಲದ ಚೀಲ , ಅರಣ್ಯ ಪರ್ವ,8,7
 42.		ಹಡಪಗ, ತಾಂಬೂಲ ಹಿಡಿದಿರುವವನು, ಕರ್ಣ ಪರ್ವ,24,32
 43.		ಹಡಪವಳ, ಸಂಚಿ ಜನ, ಸಭಾ ಪರ್ವ,1,58
 44.		ಹಡಪಿಗ, ಅವಶ್ಯ ವಸ್ತುಗಳನ್ನುಳ್ಳ ಚರ್ಮದ ಚೀಲವನ್ನು ಒಯ್ಯುವವನು, ಶಲ್ಯ ಪರ್ವ,1,8
 45.		ಹಡಪಿಗ, ರಾಜರು ಮುಂತಾದ ಹಿರಿಯರಿಗೆ ಅವಶ್ಯವಾದ ವಸ್ತುಗಳನ್ನು ಚರ್ಮದ ಚೀಲದಲ್ಲಿ (ಹಡಪ) ಹಾಕಿಕೊಂಡು ಅವರ ಸಮೀಪದಲ್ಲಿರುತ್ತಿದ್ದವ, ಗದಾ ಪರ್ವ,2,2
 46.		ಹಡಪಿಗ, ತಮ್ಮ ಯಜಮಾನರಿಗೆ ಅವಶ್ಯವುಳ್ಳ ವಸ್ತುಗಳನ್ನು ಹೊಂದಿರುವ ಚರ್ಮದ ಚೀಲ, ಗದಾ ಪರ್ವ,2,40
 47.		ಹಡೆಯಿರಿ, ಗಳಿಸಿರಿ, ಭೀಷ್ಮ ಪರ್ವ,9,30
 48.		ಹಣಗಿ, ಬಾಗಿ, ಭೀಷ್ಮ ಪರ್ವ,4,21
 49.		ಹಣಗಿದರು, ಅಡಗಿಕೊಂಡರು, ಸಭಾ ಪರ್ವ,16,57
 50.		ಹಣವಿಗೆ, ಹಣಕ್ಕಾಗಿ, ಭೀಷ್ಮ ಪರ್ವ,1,38
 51.		ಹಣಿ, ಬಡಿದುಹಾಕು, ಸಭಾ ಪರ್ವ,14,41
 52.		ಹಣಿ, ಧ್ವಂಸಮಾಡು, ಆದಿ ಪರ್ವ,8,40
 53.		ಹಣಿಗು, ಹೊಂಚುಹಾಕು, ಆದಿ ಪರ್ವ,8,40
 54.		ಹಣಿದ, ಗುಂಪು, ಗದಾ ಪರ್ವ,4,47, , 
 55.		ಹಣಿದವಾಡಲಿ, ಕತ್ತರಿಸಿಹಾಕಲಿ, ಗದಾ ಪರ್ವ,8,33
 56.		ಹಣಿದವಾಡು, ಕತ್ತರಿಸು, ಗದಾ ಪರ್ವ,3,19
 57.		ಹಣಿದು, ಹೊಡೆದು, ಆದಿ ಪರ್ವ,7,58
 58.		ಹಣಿಯಲಿ, ನಾಶವಾಗಲಿ, ಗದಾ ಪರ್ವ,11,47
 59.		ಹಣುಗು, ಹಿಂದೆಗೆ, ಕರ್ಣ ಪರ್ವ,25,9
 60.		ಹಣುಗು, ಇಣುಕು, ಗದಾ ಪರ್ವ,4,47
 61.		ಹತಮಹೀಶರು, ಮರಣ ಹೊಂದಿದ ರಾಜರು., ಗದಾ ಪರ್ವ,12,21
 62.		ಹತಿ, ತಾಳ., ಕರ್ಣ ಪರ್ವ,7,23
 63.		ಹತ್ತರಿಕೆ, ಹೊಳಪಾದ ಮೈ., ಶಲ್ಯ ಪರ್ವ,2,62
 64.		ಹತ್ತಲಿ, ಆರಂಭವಾಗಲಿ, ಆದಿ ಪರ್ವ,15,42
 65.		ಹತ್ತಳ, ಚಾವಳಿ, ಉದ್ಯೋಗ ಪರ್ವ,11,18
 66.		ಹತ್ತಾಹತ್ತಿ, ಮಲ್ಲಯುದ್ಧ, ಸಭಾ ಪರ್ವ,2,93
 67.		ಹತ್ತಿಗೆ, ಸೇರಿಕೆಯಾದ ಜಾಗ, ಶಲ್ಯ ಪರ್ವ,2,6
 68.		ಹತ್ತಿಗೆ, ಬಂಧನ, ಗದಾ ಪರ್ವ,11,10
 69.		ಹತ್ತಿಗೆ, ಕಟ್ಟುಗಳು, ಕರ್ಣ ಪರ್ವ,3,31
 70.		ಹತ್ತಿದವು, ಲೆಕ್ಕಕೆ ಸಿಕ್ಕಿದವು, ಶಲ್ಯ ಪರ್ವ,2,7
 71.		ಹತ್ತಿದವು, ಹತ್ತಿಬಿಟ್ಟವು, ಸಭಾ ಪರ್ವ,3,30
 72.		ಹತ್ತಿಸು, ಅಂಟಿಸು, ಅರಣ್ಯ ಪರ್ವ,3,18
 73.		ಹತ್ತು, ಮುಟ್ಟು, ಆದಿ ಪರ್ವ,13,59
 74.		ಹತ್ತುಗೆ, ಸೇರಿಕೆ, ಶಲ್ಯ ಪರ್ವ,2,26
 75.		ಹತ್ತೆ, ಸಮೀಪ , ಗದಾ ಪರ್ವ,12,16
 76.		ಹದನ, ಸಮಾಚಾರ , ಗದಾ ಪರ್ವ,4,2
 77.		ಹದನ, ಸಂಗತಿ, ಗದಾ ಪರ್ವ,11,46
 78.		ಹದನ, ಸ್ಥಿತಿ , ಗದಾ ಪರ್ವ,6,4, , ,   ಕೆಲಸ.,
 79.		ಹದನ, ವಾರ್ತೆ, ಗದಾ ಪರ್ವ,4,29, , 
 80.		ಹದನ, ರೀತಿ , ವಿರಾಟ ಪರ್ವ,7,26
 81.		ಹದನ, ಕೆಲಸ , ಗದಾ ಪರ್ವ,11,32
 82.		ಹದನಹುದು, ಆ ರೀರಿ ಕಾಣುತ್ತದೆ., ವಿರಾಟ ಪರ್ವ,4,42
 83.		ಹದನಾಯ್ತು, ಹೀಗಾಯಿತು, ದ್ರೋಣ ಪರ್ವ,7,26
 84.		ಹದನು, ಸರಿಯಾದ ರೀತಿ., ಉದ್ಯೋಗ ಪರ್ವ,6,2
 85.		ಹದನು, ಪ್ರಕೃತ ಕಾರ್ಯ, ಭೀಷ್ಮ ಪರ್ವ,1,3
 86.		ಹದನು, ಔಚಿತ್ಯ, ಆದಿ ಪರ್ವ,18,24
 87.		ಹದವಳೆ, ಒಳ್ಳೆಯ ಮಳೆ, ವಿರಾಟ ಪರ್ವ,10,37
 88.		ಹದವಿಲ್ಲು, ಯೋಗ್ಯವಾದ ಬಿಲ್ಲು, ಆದಿ ಪರ್ವ,15,28
 89.		ಹದಿರ, ಹದವಾದ, ದ್ರೋಣ ಪರ್ವ,3,11
 90.		ಹದಿರು, ವ್ಯಂಗ್ಯ, ಸಭಾ ಪರ್ವ,14,29
 91.		ಹದುಳ, ನೆಮ್ಮದಿ, ಉದ್ಯೋಗ ಪರ್ವ,7,3
 92.		ಹದುಳ, ಕ್ಷೇಮ  (ಗೆಲುವಾಗು , ವಿರಾಟ ಪರ್ವ,8,57
 93.		ಹದುಳವಿಡÀು, ಕ್ಷೇಮದಿಂದಿರಿಸು , ಗದಾ ಪರ್ವ,11,32
 94.		ಹದುಳಿಸಿ, ಸಮಾಧಾನಪಟ್ಟುಕೊಂಡು, ದ್ರೋಣ ಪರ್ವ,1,7
 95.		ಹದುಳಿಸು, ಸಮಾಧಾನ ಮಾಡಿಕೋ (ಹದುಳ, ಶಲ್ಯ ಪರ್ವ,1,4
 96.		ಹದುಳಿಸು, ಸಮಾಧಾನÀದಿಂದಿರು, ಗದಾ ಪರ್ವ,8,58
 97.		ಹದುಳಿಸು, ಸರಿಹೊಂದಿಸಿಕೋ, ಸಭಾ ಪರ್ವ,1,79
 98.		ಹದುಳಿಸು, ಕಾಯು, ಉದ್ಯೋಗ ಪರ್ವ,3,103
 99.		ಹದುಳಿಸು, ಕ್ಷೇಮದಿಂದಿರು, ಕರ್ಣ ಪರ್ವ,1,9
 100.		ಹನನ, ವಿನಾಶ, ಗದಾ ಪರ್ವ,12,19
 101.		ಹನನ, ವಧೆ, ಆದಿ ಪರ್ವ,8,53
 102.		ಹನುಮಿಸಲು, ಕೆನೆಯುತ್ತ, ಭೀಷ್ಮ ಪರ್ವ,8,2
 103.		ಹಬ್ಬಿದುದು, ಹಿಗ್ಗಿತು, ಭೀಷ್ಮ ಪರ್ವ,8,11
 104.		ಹಬ್ಬುಗೆ, ಹರಡಿದ, ಉದ್ಯೋಗ ಪರ್ವ,11,15
 105.		ಹಮ್ಮ, ಸೊಕ್ಕು/ಅಹಂಕಾರ, ಉದ್ಯೋಗ ಪರ್ವ,9,22
 106.		ಹಮ್ಮಿದ, ಸಂಭವಿಸಿದ, ಭೀಷ್ಮ ಪರ್ವ,1,10
 107.		ಹಮ್ಮೀರ ರಾವುತರ, ಹಮ್ಮೀರ ದೇಶದ ಕುದುರೆ ಸವಾರರ, ಭೀಷ್ಮ ಪರ್ವ,4,65
 108.		ಹಮ್ಮು, ಸೊಕ್ಕು, ಉದ್ಯೋಗ ಪರ್ವ,9,13
 109.		ಹಮ್ಮುಗೆ, ಕಟ್ಟು, ಕರ್ಣ ಪರ್ವ,24,25
 110.		ಹಮ್ಮೈಸಿ, ಮೂರ್ಛೆಹೋಗಿ, ವಿರಾಟ ಪರ್ವ,7,33
 111.		ಹಮ್ಮೈಸು, ಮೂಛೆ ಹೋಗು, ದ್ರೋಣ ಪರ್ವ,1,59
 112.		ಹಮ್ಮೈಸು, ಮೂರ್ಛೆಹೋಗು, ಕರ್ಣ ಪರ್ವ,27,26
 113.		ಹಮ್ಮೈಸು, ಅಪೇಕ್ಷಿಸು, ದ್ರೋಣ ಪರ್ವ,19,29
 114.		ಹಯ ಅಬ್ಬರಣೆ, ಅಶ್ವದ ಹೇಷಾರವ, ಭೀಷ್ಮ ಪರ್ವ,8,5
 115.		ಹಯಾವಳಿ, ಕುದುರೆಗಳು, ಭೀಷ್ಮ ಪರ್ವ,3,4
 116.		ಹರ, ನಾಶಮಾಡುವುದು, ಗದಾ ಪರ್ವ,13,16
 117.		ಹರಗಿರಿ, ಕೈಲಾಸ, ಆದಿ ಪರ್ವ,14,5
 118.		ಹರಚರಣನಿಕ್ಷಿಪ್ತ, ಈಶ್ವರನ ಪಾದದಲ್ಲಿ ಇಟ್ಟಿರುವ, ಅರಣ್ಯ ಪರ್ವ,5,9
 119.		ಹರಡು, ಹಿಂದಿಕ್ಕಿ ಕೊಳ್ಳು, ಭೀಷ್ಮ ಪರ್ವ,6,30
 120.		ಹರಡೆ, ಒಂದು ಜಾತಿಯ ನೀರು ಹಕ್ಕಿ, ಸಭಾ ಪರ್ವ,13,2
 121.		ಹರಡೆ, ಹರಡೆಹಕ್ಕಿ, ಅರಣ್ಯ ಪರ್ವ,4,33
 122.		ಹರಡೆ, ಕೊಕ್ಕರೆ, ಆದಿ ಪರ್ವ,20,53
 123.		ಹರಣ, ಪ್ರಾಣ(ಸಂ.) ಕೇವಣಿಸು, ಗದಾ ಪರ್ವ,10,10
 124.		ಹರಣ ಭರಣ ಕ್ಷಮೆ, ಪ್ರಾಣವನ್ನು ಉಳಿಸುವ ಸಾಮಥ್ರ್ಯ, ವಿರಾಟ ಪರ್ವ,6,32
 125.		ಹರಣದವಾಣಿ, ಪ್ರಾಣದ ಅಂಜಿಕೆಯುಳ್ಳವರು, ಭೀಷ್ಮ ಪರ್ವ,8,15
 126.		ಹರತನಿಜ, ಸುಬ್ರಹ್ಮಣ್ಯ, ಅರಣ್ಯ ಪರ್ವ,6,35
 127.		ಹರದ ಮಾತು, ವ್ಯಾವಹಾರಿಕ ನೆಲೆಯ ಮಾತು, ವಿರಾಟ ಪರ್ವ,4,8
 128.		ಹರದರು, ವರ್ತಕರು, ಅರಣ್ಯ ಪರ್ವ,20,2
 129.		ಹರದೆರಕೆ, ಹರಿದೆರಕೆ ಇರಬಹುದು (ಹರಿದ=ಕತ್ತರಿಸಿ ಹಾಕಿದ) ಎರಕೆ, ವಿರಾಟ ಪರ್ವ,3,37
 130.		ಹರನ ಕಣ್ಗಿಚ್ಚು, ಶಿವನ ಮೂರನೇ ಕಣ್ಣಿನ ಬೆಂಕಿ, ಭೀಷ್ಮ ಪರ್ವ,6,34
 131.		ಹರನ ಹೋಲುವ ಸುಭಟ, ಅಶ್ವತ್ಥಾಮ , ವಿರಾಟ ಪರ್ವ,8,39, 
 132.		ಹರವರಿ, ವಿಹಾರ, ಭೀಷ್ಮ ಪರ್ವ,4,16
 133.		ಹರವಸ, ಪರವಶತೆ, ಸಭಾ ಪರ್ವ,16,57
 134.		ಹರವಿ, ನೀರು ತುಂಬುವ ಮಣ್ಣಿನ ಪಾತ್ರೆ, ಆದಿ ಪರ್ವ,10,17
 135.		ಹರವಿ, ಮಣ್ಣಿನ ಪಾತ್ರೆಗಳು, ಆದಿ ಪರ್ವ,10,25
 136.		ಹರಸಿ, ಹರಕೆ ಹೊತ್ತು, ಗದಾ ಪರ್ವ,6,3
 137.		ಹರಹಿ, ಚಾಚಿ, ಭೀಷ್ಮ ಪರ್ವ,3,72
 138.		ಹರಹಿಕೊ, ತನ್ನನ್ನೇ ಅರ್ಪಿಸಿಕೊ, ವಿರಾಟ ಪರ್ವ,10,63
 139.		ಹರಹಿಕೊಳ್ಳು, ರಕ್ಷಿಸು, ಗದಾ ಪರ್ವ,3,30
 140.		ಹರಹಿನ, ಅತಿಶಯವಾದ, ಭೀಷ್ಮ ಪರ್ವ,7,34
 141.		ಹರಹಿನಲಿ, ಹರಡಿಕೊಂಡು, ಭೀಷ್ಮ ಪರ್ವ,9,9
 142.		ಹರಹು, ಹಬ್ಬು, ಆದಿ ಪರ್ವ,12,6
 143.		ಹರಹುಗಳ ಪೂರ, ಪ್ರವಾಹದ ಸಾಗರ, ಭೀಷ್ಮ ಪರ್ವ,6,3
 144.		ಹರಹುಗೆಡು, ಚಲನೆಗೆಡು, ಕರ್ಣ ಪರ್ವ,1,15
 145.		ಹರಳು, ಕಲ್ಲಿನ ಚೂರುಗಳು, ಗದಾ ಪರ್ವ,11,26
 146.		ಹರಳುತೆಕ್ಕೆ, ಕಲ್ಲಿನ ಚೂರು, ಭೀಷ್ಮ ಪರ್ವ,3,69
 147.		ಹರಿ, ಸಾಗು, ವಿರಾಟ ಪರ್ವ,4,35
 148.		ಹರಿ, ನಿವಾರಣೆಯಾಗು, ಆದಿ ಪರ್ವ,16,2
 149.		ಹರಿ, ಸಿಂಹ, ವಿರಾಟ ಪರ್ವ,6,55
 150.		ಹರಿ, ಶ್ರೀಕೃಷ್ಣ, ಭೀಷ್ಮ ಪರ್ವ,8,21
 151.		ಹರಿ, ಆಂಜನೇಯ, ದ್ರೋಣ ಪರ್ವ,3,50
 152.		ಹರಿ, ಕೃಷ್ಣ, ಕರ್ಣ ಪರ್ವ,21,19, , 
 153.		ಹರಿ, ಚಲಿಸು, ದ್ರೋಣ ಪರ್ವ,3,13
 154.		ಹರಿ, ಧಾವಿಸು, ಆದಿ ಪರ್ವ,11,15
 155.		ಹರಿಕುಣಿ, ಕಾಲುವೆ, ಕರ್ಣ ಪರ್ವ,1,9
 156.		ಹರಿಗೆ, ಶ್ರೀಹರಿಗೆ, ಭೀಷ್ಮ ಪರ್ವ,4,7
 157.		ಹರಿಗೆ, ಒಂದು ಬಗೆ ಗುರಾಣಿ, ಭೀಷ್ಮ ಪರ್ವ,3,20
 158.		ಹರಿಗೆ, ಹಲಗೆ, ಶಲ್ಯ ಪರ್ವ,2,38
 159.		ಹರಿಗೆ, ಡೋಲು, ಭೀಷ್ಮ ಪರ್ವ,2,4
 160.		ಹರಿಗೆ, ಗುರಾಣಿ , ವಿರಾಟ ಪರ್ವ,8,5
 161.		ಹರಿಗೆ, ಗುರಾಣಿ., ದ್ರೋಣ ಪರ್ವ,15,18
 162.		ಹರಿಗೆಯ, ಗುರಾಣಿಯ, ಭೀಷ್ಮ ಪರ್ವ,4,38
 163.		ಹರಿಗೋಲು, ದೋಣಿ, ಕರ್ಣ ಪರ್ವ,22,31
 164.		ಹರಿಣಪಕ್ಷ, ಶುಕ್ಲಪಕ್ಷ, ಆದಿ ಪರ್ವ,3,11
 165.		ಹರಿತಂದ, ಹರಿತರು ಬಾ (ಬಂದ) ಧಾವಿಸು, ವಿರಾಟ ಪರ್ವ,5,4
 166.		ಹರಿತಂದು, ಮುಂದೆ ಸಾಗಿ, ಭೀಷ್ಮ ಪರ್ವ,7,2
 167.		ಹರಿತನೂಜ, ಭೀಮ (ಹರಿ, ಗದಾ ಪರ್ವ,13,7
 168.		ಹರಿತರು, ಓಡಿ ಬಾ, ವಿರಾಟ ಪರ್ವ,3,94
 169.		ಹರಿತಹ, ಮೇಲೇರಿ ಬರುವ, ದ್ರೋಣ ಪರ್ವ,1,58
 170.		ಹರಿತಹುದು, ಬೆನ್ನಟ್ಟಿಕೊಂಡು ಬರುವುದು, ಭೀಷ್ಮ ಪರ್ವ,6,39
 171.		ಹರಿದರು, ಸಾಗಿದರು, ಭೀಷ್ಮ ಪರ್ವ,1,17
 172.		ಹರಿದರು, ಓಡಾಡಿದರು, ಗದಾ ಪರ್ವ,12,6
 173.		ಹರಿದವು, ಚಲಿಸಿದವು, ದ್ರೋಣ ಪರ್ವ,1,51
 174.		ಹರಿದಳ, ಕುದುರೆಗಳ ಸೈನ್ಯ, ಗದಾ ಪರ್ವ,1,42
 175.		ಹರಿದಳು, ಓಡಿ ಬಂದಳು, ಆದಿ ಪರ್ವ,11,34
 176.		ಹರಿದಾಡು, ಓಡಾಡು, ಉದ್ಯೋಗ ಪರ್ವ,8,11
 177.		ಹರಿದಿನ, ಏಕಾದಶಿ ದ್ವಾದಶಿ, ವಿರಾಟ ಪರ್ವ,7,13
 178.		ಹರಿದು, ವೇಗವಾಗಿ, ಗದಾ ಪರ್ವ,8,32
 179.		ಹರಿದು ಹಬ್ಬುವ, ಹೊರಬಂದು ಹರಡುತ್ತಿದ್ದ, ಭೀಷ್ಮ ಪರ್ವ,6,33
 180.		ಹರಿದುದು, ಕಾಣೆಯಾಯಿತು, ಗದಾ ಪರ್ವ,7,30
 181.		ಹರಿದುದು, ಚೆದರಿತು, ಆದಿ ಪರ್ವ,15,37
 182.		ಹರಿದೂರ, ಹರದಾರಿ, ಗದಾ ಪರ್ವ,3,35
 183.		ಹರಿದೇರ, ಹರಿದ +ಏರ, ಗದಾ ಪರ್ವ,3,11
 184.		ಹರಿದೊರೆವೆದ್ದ, ಕೃಷ್ಣಜೋಯಿಸರ ಪಾಠ ಹ¾Éದೊ¾ವೆದ್ದ, ವಿರಾಟ ಪರ್ವ,7,38
 185.		ಹರಿನಂದನ, ವಾಯುಪುತ್ರ, ಆದಿ ಪರ್ವ,9,12
 186.		ಹರಿನಂದನ, ಇಂದ್ರ ಪುತ್ರ ಅರ್ಜುನ, ಭೀಷ್ಮ ಪರ್ವ,6,21
 187.		ಹರಿನಿಭ, ಇಂದ್ರಸಮಾನನಾದ, ಆದಿ ಪರ್ವ,19,11
 188.		ಹರಿಬ, ಸೇಡು, ಗದಾ ಪರ್ವ,9,26
 189.		ಹರಿಬ, ಮುಯ್ಯಿ, ಅರಣ್ಯ ಪರ್ವ,1,23
 190.		ಹರಿಬ, ಆಶ್ರಯ , ದ್ರೋಣ ಪರ್ವ,1,8, , 
 191.		ಹರಿಬ, ಹೊಣೆ, ಶಲ್ಯ ಪರ್ವ,3,70
 192.		ಹರಿಬ, ಹೊಣೆಗಾರಿಕೆ, ಕರ್ಣ ಪರ್ವ,8,34
 193.		ಹರಿಬ, ಕಾರ್ಯ, ಕರ್ಣ ಪರ್ವ,19,25
 194.		ಹರಿಬ, ಕರ್ತವ್ಯÀ, ದ್ರೋಣ ಪರ್ವ,10,17
 195.		ಹರಿಬ, ಕೆಲಸ, ಗದಾ ಪರ್ವ,2,33, , 
 196.		ಹರಿಬ, ಕೆಲಸ, ಶಲ್ಯ ಪರ್ವ,3,27, , 
 197.		ಹರಿಯ, ಕೃಷ್ಣನ, ದ್ರೋಣ ಪರ್ವ,5,2
 198.		ಹರಿಯಣ, ಹರಿವಾಣ ಪಾತ್ರೆ, ವಿರಾಟ ಪರ್ವ,3,36
 199.		ಹರಿಯದು, ಸಾಧ್ಯವಾಗದು, ಶಲ್ಯ ಪರ್ವ,1,31
 200.		ಹರಿಯದು, ಮುಗಿಯುವುದಿಲ್ಲ, ಗದಾ ಪರ್ವ,2,9
 201.		ಹರಿಯದು, ಕೈಲಾಗದು , ಗದಾ ಪರ್ವ,10,16
 202.		ಹರಿಯಬಿಡು, ಮುಂದೆ ನುಗ್ಗಲು ಬಿಡು. ಬೇವು ಬಿಕ್ಕೆ, ವಿರಾಟ ಪರ್ವ,9,40
 203.		ಹರಿಯುದಯಿಸಿದನು, ಕೃಷ್ಣನು ಹುಟ್ಟಿದ, ಸಭಾ ಪರ್ವ,5,42
 204.		ಹರಿಯೆಚ್ಚಡೆ, ಕತ್ತರಿಸುವ ಹಾಗೆ ಹೊಡೆಯಲು, ದ್ರೋಣ ಪರ್ವ,6,54
 205.		ಹರಿವ, ನಾ±ವನ್ನುÀ, ಆದಿ ಪರ್ವ,8,41
 206.		ಹರಿವ, ಪರಿಹಾರವನ್ನು, ದ್ರೋಣ ಪರ್ವ,8,25
 207.		ಹರಿವ, ಹರಿಬ, ಕರ್ಣ ಪರ್ವ,26,19
 208.		ಹರಿವ, ಕೊನೆಗಾಣಿಸು, ಗದಾ ಪರ್ವ,2,22
 209.		ಹರಿವ ಹೆಜ್ಜೆಯ, ನಡಿಗೆಯ ಗುರುತನ್ನು (ತಿಳಿಯಲು), ವಿರಾಟ ಪರ್ವ,4,8
 210.		ಹರಿವಾಗು, ಮುಗಿ, ವಿರಾಟ ಪರ್ವ,8,38
 211.		ಹರಿವಾಣ, ಅಗಲದ ತಟ್ಟೆ, ಆದಿ ಪರ್ವ,16,28
 212.		ಹರಿವಾಯ್ತು, ಮುಗಿಯಿತು, ವಿರಾಟ ಪರ್ವ,8,38
 213.		ಹರಿವು, ವಿನಾಶ, ಗದಾ ಪರ್ವ,3,19
 214.		ಹರಿವು, ಕೊನೆಗಾಣಿಸುವ ಉಪಾಯ, ದ್ರೋಣ ಪರ್ವ,11,17
 215.		ಹರಿಸು, ಹೋಗಬಿಡು, ಗದಾ ಪರ್ವ,4,45, , 
 216.		ಹರಿಸೂನು, ಇಂದ್ರನ ಮಗ ಅರ್ಜುನ, ಅರಣ್ಯ ಪರ್ವ,6,9
 217.		ಹರಿಹಂಚಾಗು, ಪಾಲಾಗು, ಉದ್ಯೋಗ ಪರ್ವ,1,29
 218.		ಹರಿಹಯ, ದೇವೇಂದ್ರ, ಉದ್ಯೋಗ ಪರ್ವ,4,60
 219.		ಹರಿಹರಿದು, ಓಡಿ, ವಿರಾಟ ಪರ್ವ,7,51
 220.		ಹರಿಹರಿದು, ಓಡಿ ಓಡಿ, ವಿರಾಟ ಪರ್ವ,5,4
 221.		ಹರುಕ, ಇದು ಒಂದು ಗ್ರಾಮೀಣ ಬೈಗುಳ, ವಿರಾಟ ಪರ್ವ,6,21, , 
 222.		ಹರುಗೋಲು, ನೀರನ್ನು ದಾಟಲು ಬಿದಿರು ಮತ್ತು ಚರ್ಮದಿಂದ ಮಾಡಿದ ದೊಡ್ಡ ಕುಕ್ಕೆಯಂತಹ ಸಾಧನ, ದ್ರೋಣ ಪರ್ವ,4,38
 223.		ಹರುವು, ಅಪಾಯ, ಅರಣ್ಯ ಪರ್ವ,3,17
 224.		ಹರುವು, ಅಂತ್ಯ: ಫ¾Âವು, ವಿರಾಟ ಪರ್ವ,3,94
 225.		ಹರುವು, ಉಪಾಯ/ನೀತಿ, ಉದ್ಯೋಗ ಪರ್ವ,6,29
 226.		ಹರುಷಜಲಧಿ ಉಕ್ಕಿಸಲುಬೇಕು, ಸಂತೋಷಹುಟ್ಟಿಸಬೇಕು, ಭೀಷ್ಮ ಪರ್ವ,1,22
 227.		ಹರುಷಲತೆ, ಹರ್ಷವೆಂಬ ಬಳ್ಳಿ, ಸಭಾ ಪರ್ವ,1,3
 228.		ಹರೆಗಡಿ, ಸಂಪೂರ್ಣವಾಗಿ ನಾಶಮಾಡು, ದ್ರೋಣ ಪರ್ವ,18,27
 229.		ಹರೆಗಡಿ, ಛಿದ್ರಿಸು, ವಿರಾಟ ಪರ್ವ,7,36
 230.		ಹರೆಗಡಿ, ಕಡಿದು  ಚೆಲ್ಲು, ಕರ್ಣ ಪರ್ವ,19,33
 231.		ಹರೆಗಡಿ, ಕೊಚ್ಚಿಹಾಕು.... ಭೂತಳ, ವಿರಾಟ ಪರ್ವ,8,52
 232.		ಹರೆಗಡಿ, ಚಲ್ಲಾಪಿಲ್ಲಿಮಾಡು , ಗದಾ ಪರ್ವ,4,31
 233.		ಹರೆಗಡಿ, ಚಲ್ಲಾಪಿಲ್ಲಿಮಾಡಿ ಕತ್ತರಿಸು., ಗದಾ ಪರ್ವ,1,1
 234.		ಹರೆದ ಬಲ, ಚೆದುರಿದ ಸೇನೆ, ದ್ರೋಣ ಪರ್ವ,2,50
 235.		ಹರೆದರು, ಓಡಿದರು, ಭೀಷ್ಮ ಪರ್ವ,8,28
 236.		ಹರೆದರೆ, ತೊಲಗಿದರೆ, ಭೀಷ್ಮ ಪರ್ವ,8,45
 237.		ಹರೆದವು, ಚೆದರಿದವು, ಭೀಷ್ಮ ಪರ್ವ,4,11
 238.		ಹರೆದು, ಡಿಕ್ಕಿ ಹೊಡೆದು, ಭೀಷ್ಮ ಪರ್ವ,4,91
 239.		ಹರೆದುದು, ನಿವಾರಣೆ ಆಯಿತು, ಭೀಷ್ಮ ಪರ್ವ,7,34
 240.		ಹರೆದುದು, ಪ್ರಕಟವಾಯಿತು, ಗದಾ ಪರ್ವ,4,10
 241.		ಹರೆದುದು, ಮುಗಿಯಿತು, ದ್ರೋಣ ಪರ್ವ,4,12
 242.		ಹರೆದುದು, ಹರಿದುಹೋಯಿತು, ಗದಾ ಪರ್ವ,10,4
 243.		ಹಲ, ನೇಗಿಲು, ಆದಿ ಪರ್ವ,7,29
 244.		ಹಲಗೆ, ಪಗಡೆಯಾಟದ ಮಣೆ (ಪಗಡೆ ಹಾಸು), ಗದಾ ಪರ್ವ,2,34
 245.		ಹಲಗೆ, ಫಲಕ, ಭೀಷ್ಮ ಪರ್ವ,3,15
 246.		ಹಲಧರ, ನೇಗಿಲನ್ನು ಹಿಡಿದಿರುವವನು , ಗದಾ ಪರ್ವ,6,1, , 
 247.		ಹಲಧರ, ಬಲರಾಮ (ನೇಗಿಲನ್ನು ಕೈಯಲ್ಲಿ ಹಿಡಿದಿರುವವನು) ಕಳಚಿ, ಆದಿ ಪರ್ವ,14,27
 248.		ಹಲಧರ, ಬಲರಾಮ (ಇವನ ಆಯುಧ `ಹಲ' ವಾದ್ದರಿಂದ), ಆದಿ ಪರ್ವ,19,41
 249.		ಹಲಧರನುಳಯೆ, ಬಲರಮನನ್ನು ಬಿಟ್ಟು, ಸಭಾ ಪರ್ವ,2,87
 250.		ಹಲಬರು, ಅನೇಕ ಜನರು, ಉದ್ಯೋಗ ಪರ್ವ,9,64
 251.		ಹಲಾಯುಧ, ಬಲರಾಮ (ನೇಗಿಲನ್ನು ಆಯುಧವಾಗಿ ಉಳ್ಳವನು), ಆದಿ ಪರ್ವ,15,22
 252.		ಹಲುಬಿದನು, ದುಃಖಿಸಿದನು., ಭೀಷ್ಮ ಪರ್ವ,6,34
 253.		ಹಲುಮೊರೆ, ಹಲ್ಲನ್ನು ಕಡಿ, ದ್ರೋಣ ಪರ್ವ,1,64
 254.		ಹಲ್ಲಣ, ಜೀನು, ಕರ್ಣ ಪರ್ವ,24,14
 255.		ಹಲ್ಲಣಿಸಿ, ಯುದ್ಧ ಸಾಮಗ್ರಿ ಸಿದ್ಧಪಡಿಸಿ, ಭೀಷ್ಮ ಪರ್ವ,7,2
 256.		ಹಲ್ಲಣಿಸಿದವು, ಕುದುರೆಗಳು ಸಜ್ಜುಗೊಳಿಸಲ್ಪಟ್ಟವು., ಸಭಾ ಪರ್ವ,8,39
 257.		ಹಲ್ಲಣಿಸು, ಲಗಾಮನು ಹಾಕಿ ಕುದುರೆಯನ್ನು ಸಿದ್ಧಗೊಳಿಸುವುದು, ದ್ರೋಣ ಪರ್ವ,4,22
 258.		ಹಲ್ಲಣಿಸು, ಸಿದ್ಧವಾಗು, ಆದಿ ಪರ್ವ,15,44
 259.		ಹಲ್ಲಣಿಸು, ಹಲ್ಲಣ ಹಾಕಿ ಸಿದ್ಧ ಪಡಿಸು, ವಿರಾಟ ಪರ್ವ,4,41
 260.		ಹಲ್ಲಣಿಸು, ಹಲ್ಲಣ ಕಟ್ಟಿಕೊ, ವಿರಾಟ ಪರ್ವ,4,27
 261.		ಹಲ್ಲಣಿಸು, ಹಲ್ಲಣವನ್ನು ತೊಡಿಸು, ಗದಾ ಪರ್ವ,9,38
 262.		ಹಲ್ಲಣೆ, ಜೀನು, ಕರ್ಣ ಪರ್ವ,22,17
 263.		ಹಲ್ಲಳ, ಇವು ಆನೆ, ಸಭಾ ಪರ್ವ,5,46
 264.		ಹಲ್ಲಳ, ಜೀನು, ಕರ್ಣ ಪರ್ವ,5,3
 265.		ಹವಣ, ನೆಲೆ, ಉದ್ಯೋಗ ಪರ್ವ,4,2
 266.		ಹವಣನು, ರೀತಿಯನ್ನು, ದ್ರೋಣ ಪರ್ವ,6,15
 267.		ಹವಣಲ್ಲ, ಕೈವಶವಲ್ಲ, ಭೀಷ್ಮ ಪರ್ವ,7,12
 268.		ಹವಣಿನ, ಸಾಹಸಕ್ಕೆ ತಕ್ಕ, ಭೀಷ್ಮ ಪರ್ವ,1,37
 269.		ಹವಣಿಲ್ಲ, ನಿಯಂತ್ರಣಕ್ಕೆ ಮೀರಿದ್ದು, ದ್ರೋಣ ಪರ್ವ,3,17
 270.		ಹವಣಿಸು, ಪ್ರಯತ್ನಿಸು, ಭೀಷ್ಮ ಪರ್ವ,5,16
 271.		ಹವಣು, ಹಿಡಿತ, ದ್ರೋಣ ಪರ್ವ,4,25
 272.		ಹವಣು, ಅಳತೆ, ದ್ರೋಣ ಪರ್ವ,10,44
 273.		ಹವಳದ ಹಲಗೆಗಳ ಮಾಳಿಗೆಯ, ಹವಳದ ಹಲಗೆಗಳನ್ನು ಜೋಡಿಸಿದ ಮೇಲ್ಛಾವಣಿಯ, ಸಭಾ ಪರ್ವ,5,29
 274.		ಹವಿಸ್ಸು, ಯಜ್ಞಾಹುತಿ., ಉದ್ಯೋಗ ಪರ್ವ,4,89
 275.		ಹವ್ಯಕವ್ಯ, ದೇವತೆಗಳಿಗೆ ಹಾಗೂ ಪಿತೃಗಳಿಗೆ ಅರ್ಪಿಸುವ ಪದಾರ್ಥಗಳು, ಆದಿ ಪರ್ವ,20,42
 276.		ಹವ್ಯವಾಹನ, ಅಗ್ನಿ (ಹವಿಸ್ಸನ್ನು ಒಯ್ಯುವವನು) ಭಾರ, ಆದಿ ಪರ್ವ,20,16
 277.		ಹಸನ, ಒಳ್ಳಿತು, ಆದಿ ಪರ್ವ,8,48
 278.		ಹಸರ, ಪ್ರಸರ, ಶಲ್ಯ ಪರ್ವ,2,49
 279.		ಹಸರ, ಹರಡಿರುವಿಕೆ, ಉದ್ಯೋಗ ಪರ್ವ,3,47
 280.		ಹಸಾದ, ಪ್ರಸಾದ, ಆದಿ ಪರ್ವ,8,78
 281.		ಹಸಾದ, ಮಹಾಪ್ರಸಾದ, ಗದಾ ಪರ್ವ,11,35
 282.		ಹಸಾದ, ಅನುಗ್ರಹ (ಒಪ್ಪಿಗೆ), ಭೀಷ್ಮ ಪರ್ವ,7,13
 283.		ಹಸಾದವ ಹಾಯ್ಕಿ, ಪ್ರಸಾದವೆಂದು ಸ್ವೀಕರಿಸಿ, ಸಭಾ ಪರ್ವ,5,24
 284.		ಹಸುಗೆ, ವಿಭಾಗ , ಗದಾ ಪರ್ವ,6,7
 285.		ಹಸುಗೆ, ಪಸುಗೆ ಹಂಚಿಕೆ, ದ್ರೋಣ ಪರ್ವ,1,26
 286.		ಹಸುಬ, ಶಕುನದ ಹಕ್ಕಿ, ಅರಣ್ಯ ಪರ್ವ,17,33
 287.		ಹಸುಬ, ಒಂದು ಬಗೆಯ ಶಕುನದ ಹಕ್ಕಿ, ಅರಣ್ಯ ಪರ್ವ,13,21
 288.		ಹಸುಬ, ಒಂದು ಜಾತಿಯ ಹಕ್ಕಿ, ಸಭಾ ಪರ್ವ,13,2
 289.		ಹಸುಬ, ಹಾರೀತ, ಅರಣ್ಯ ಪರ್ವ,4,33
 290.		ಹಳಕು, ಹಳುಕು , ವಿರಾಟ ಪರ್ವ,2,54
 291.		ಹಳಚಲು, ಹೋರಾಡಲು, ಭೀಷ್ಮ ಪರ್ವ,3,1
 292.		ಹಳಚಿ, ಅಪ್ಪಳಿಸಿ, ದ್ರೋಣ ಪರ್ವ,3,78
 293.		ಹಳಚಿ, ಹೋರಾಡಿ, ದ್ರೋಣ ಪರ್ವ,5,42
 294.		ಹಳಚಿ, ತಾಗಿ, ಭೀಷ್ಮ ಪರ್ವ,4,7
 295.		ಹಳಚಿದನು, ಹೊಡೆದನÀು, ದ್ರೋಣ ಪರ್ವ,3,34
 296.		ಹಳಚಿದರು, ಹೋರಾಡಿದರು, ಭೀಷ್ಮ ಪರ್ವ,5,0
 297.		ಹಳಚಿದುದು, ಹೋರಾಡಿದವು., ಭೀಷ್ಮ ಪರ್ವ,4,0
 298.		ಹಳಚಿದೊಡೆ, ಬಡಿದಾಡಿದಾಗ, ಭೀಷ್ಮ ಪರ್ವ,4,4
 299.		ಹಳಚು, ಪಳಂಚು, ವಿರಾಟ ಪರ್ವ,4,46
 300.		ಹಳಚು, ಮೇಲೆಬೀಳು, ಕರ್ಣ ಪರ್ವ,11,15
 301.		ಹಳಚು, ಆಕ್ರಮಣಮಾಡು, ಕರ್ಣ ಪರ್ವ,13,0
 302.		ಹಳಚು, ಹಣಚು , ಗದಾ ಪರ್ವ,7,0, , ,
 303.		ಹಳಚು, ಹಣಚು , ಗದಾ ಪರ್ವ,2,12, , ,  ಹೊಡೆ,
 304.		ಹಳಚು, ಕಾದಾಡು, ಭೀಷ್ಮ ಪರ್ವ,4,36
 305.		ಹಳದಿಯ ಪಾರಿ, ಹಳದಿ ವಸ್ತ್ರ.  ಜೋನೆಗಪಳಿ, ಭೀಷ್ಮ ಪರ್ವ,4,52
 306.		ಹಳವಿಗೆ, ಹೊಯ್ದಾಟ, ದ್ರೋಣ ಪರ್ವ,3,52
 307.		ಹಳಹಳಿಕೆ, ಪ್ರಖರ, ಕರ್ಣ ಪರ್ವ,23,5
 308.		ಹಳಹಳಿಕೆ, ಆವೇಶÀ, ಶಲ್ಯ ಪರ್ವ,2,1
 309.		ಹಳಹಳಿಕೆ, ತಳಮಳ, ಅರಣ್ಯ ಪರ್ವ,8,50
 310.		ಹಳಹಳಿಕೆ, ತೀವ್ರತೆ, ಕರ್ಣ ಪರ್ವ,24,53
 311.		ಹಳಿವು, ನಿಂದೆ , ವಿರಾಟ ಪರ್ವ,3,2
 312.		ಹಳಿವು, ನಿಂದೆ., ಉದ್ಯೋಗ ಪರ್ವ,6,4
 313.		ಹಳಿವು, ಅಪಮಾನ, ಗದಾ ಪರ್ವ,5,23, , ,  ವಿನಾಶ, 
 314.		ಹಳಿವು, ಅಪಕೀರ್ತಿ, ವಿರಾಟ ಪರ್ವ,2,25
 315.		ಹಳುಕು, ಚೂರು, ಕರ್ಣ ಪರ್ವ,21,4
 316.		ಹಳುವ, ಅರಣ್ಯ, ಗದಾ ಪರ್ವ,4,25
 317.		ಹಳುವ, ಅಡವಿ, ಆದಿ ಪರ್ವ,8,93
 318.		ಹಳುಹಳುವಾಯಿ, ಸುಲಭವಾದ ದಾರಿ, ಕರ್ಣ ಪರ್ವ,20,36
 319.		ಹಳೂಹಳು, ಮೆಚ್ಚುಗೆ ಸೂಚಿಸುವ ಒಂದು ಪದ, ದ್ರೋಣ ಪರ್ವ,17,11
 320.		ಹಾಣಾಹಾಣಿ, ಹಣಾಹಣಿ , ಭೀಷ್ಮ ಪರ್ವ,4,27
 321.		ಹಾಯಿ, ನುಗ್ಗು, ವಿರಾಟ ಪರ್ವ,5,38
 322.		ಹಾಯಿದರು, ಮುನ್ನುಗ್ಗಿದ್ದರು, ಗದಾ ಪರ್ವ,9,3
 323.		ಹಾಯಿದರು, ಓಡಿಹೋದರು, ಕರ್ಣ ಪರ್ವ,4,24
 324.		ಹಾಯಿದು, ಮೇಲುಬೀಳು, ಆದಿ ಪರ್ವ,2,32
 325.		ಹಾಯ್ಕಿದೆ, ಬಿಸಾಡಿದೆ, ಭೀಷ್ಮ ಪರ್ವ,3,35
 326.		ಹಾಯ್ದನು, ವೇಗವಾಗಿ ನಡೆದ, ಗದಾ ಪರ್ವ,3,1
 327.		ಹಾಯ್ದನು, ಹಾರಿದನು, ಗದಾ ಪರ್ವ,8,50
 328.		ಹಾಯ್ವೆವು, ಹೋಗುತ್ತೇವೆ, ಗದಾ ಪರ್ವ,8,58
 329.		ಹಾರ, ಆರಾಮ, ಆದಿ ಪರ್ವ,7,1
 330.		ಹಾರಚಯ, ಹಾರಗಳ ಗುಂಪು, ಗದಾ ಪರ್ವ,11,19
 331.		ಹಾರಲೇಕೆ, ನಿರೀಕ್ಷಿಸುವುದೇಕೆ, ಉದ್ಯೋಗ ಪರ್ವ,2,10
 332.		ಹಾರಿದವು, ದೂರ ಸರಿದವು, ಭೀಷ್ಮ ಪರ್ವ,7,8
 333.		ಹಾರುವತಿ, ಬ್ರಾಹ್ಮಣಸ್ತ್ರೀ, ಆದಿ ಪರ್ವ,15,36
 334.		ಹಾ¾ು, ಸೂಸು, ಕರ್ಣ ಪರ್ವ,11,15
 335.		ಹಾಲಾಹಲ, ಘೋರ ವಿಷ, ಉದ್ಯೋಗ ಪರ್ವ,6,11
 336.		ಹಾವಸೆ, ಪಾಚಿಸಸ್ಯ, ಅರಣ್ಯ ಪರ್ವ,5,14
 337.		ಹಾವಿನ ಹಳವಿಗೆ, ಸರ್ಪಧ್ವಜ, ಭೀಷ್ಮ ಪರ್ವ,3,15
 338.		ಹಾವುಮೆಕ್ಕೆ, ಕಹಿಯಾದ ಹಣ್ಣು ಬಿಡುವ ಒಂದು ಗಿಡ., ಅರಣ್ಯ ಪರ್ವ,17,15
 339.		ಹಾಸ, ಪಾಶ, ಕರ್ಣ ಪರ್ವ,22,31
 340.		ಹಾಸಂಗಿ, ಪಗಡೆಯ ಹಾಸು, ವಿರಾಟ ಪರ್ವ,9,12
 341.		ಹಾಸಂಗಿ, ಪಗಡೆಯದಾಳ, ಆದಿ ಪರ್ವ,13,42
 342.		ಹಾಸರೆ, ಹಾಸು ಬಂಡೆ, ವಿರಾಟ ಪರ್ವ,3,58
 343.		ಹಾಸರೆ, ಹಾಸುಗಲ್ಲು, ಸಭಾ ಪರ್ವ,13,30
 344.		ಹಾಸರೆ, ಕಲ್ಲಿನ ಚಪ್ಪಡಿ, ಅರಣ್ಯ ಪರ್ವ,22,42
 345.		ಹಾಸುಗಳು, ನೆಲಕ್ಕೆ ಹಾಸುವ ಬಟ್ಟೆಗಳು ಅಥವ ಹಾಸಿಗೆಯ ಮೇಲೆ ಹಾಸುವ ಬಟ್ಟೆಗಳು, ಗದಾ ಪರ್ವ,4,14
 346.		ಹಾಹಾವಿರಾವ, ಹಾಹಾಕಾರ, ಗದಾ ಪರ್ವ,10,14
 347.		ಹಾಹೆ, ಬೊಂಬೆ, ಕರ್ಣ ಪರ್ವ,19,45
 348.		ಹಾಹೆ, ನೆರಳು, ವಿರಾಟ ಪರ್ವ,10,66
 349.		ಹಾಳಿ, ಪಾಳಿ, ದ್ರೋಣ ಪರ್ವ,1,26
 350.		ಹಾಳು ಹೊರು, ಸರ್ವನಾಶವಾಗು, ಅರಣ್ಯ ಪರ್ವ,16,24
 351.		ಹಿಂಗಿದನು, ಹಿಂದಿರುಗಿದನು, ದ್ರೋಣ ಪರ್ವ,6,22
 352.		ಹಿಂಗಿದನು, ಅಡಗಿದನು, ಭೀಷ್ಮ ಪರ್ವ,6,22
 353.		ಹಿಂಗಿದವು, ಕಾಣದಾದವು, ಗದಾ ಪರ್ವ,6,28
 354.		ಹಿಂಗು, ಹಿಂದೆ ಸರಿ, ಆದಿ ಪರ್ವ,14,22
 355.		ಹಿಂಗುವ, ತಪ್ಪಿಸಿಕೊಳ್ಳುವ, ಗದಾ ಪರ್ವ,7,51
 356.		ಹಿಂಚಿತು, ಹಿಮ್ಮೆಟ್ಟಿಸಿತು, ಆದಿ ಪರ್ವ,7,39
 357.		ಹಿಂಚು, ಹಿಂದೆ ಬೀಳು, ಸಭಾ ಪರ್ವ,1,3
 358.		ಹಿಂಡಾಕಳು, ಗೋ ಸಮೂಹ, ವಿರಾಟ ಪರ್ವ,7,35
 359.		ಹಿಂಡೆಯ, ಪಿಂಡದ, ಆದಿ ಪರ್ವ,8,73
 360.		ಹಿಂದಣ ಕೊರತೆಯ, ಹಿಂದಿನ ದಿನಗಳ ನಷ್ಟದ, ಭೀಷ್ಮ ಪರ್ವ,9,21
 361.		ಹಿಂದಿಕ್ಕಿ ಕೊಂಬರೆ, ನಮ್ಮನ್ನು ರಕ್ಷಣೆಯಲ್ಲಿ ಇರಿಸಿಕೊಂಡರೆ, ಭೀಷ್ಮ ಪರ್ವ,1,22
 362.		ಹಿಂದುಗಳೆ, ಹಿಂದೆಗೆ, ಕರ್ಣ ಪರ್ವ,8,29
 363.		ಹಿಂದುಗಳೆಯದೆ, ನಿರ್ಲಕ್ಷಿಸದೆ, ಉದ್ಯೋಗ ಪರ್ವ,5,11
 364.		ಹಿಂದೆ ಹತ್ತದೆ, ಜೊತೆಯಲ್ಲೇ ಅಂಟಿಕೊಳ್ಳದೆ, ವಿರಾಟ ಪರ್ವ,3,31
 365.		ಹಿಂಬೆಳೆ, ಹಿಂದೆಸರಿ , ಗದಾ ಪರ್ವ,5,33
 366.		ಹಿಂಸಾಗಮ, ಹಿಂಸೆಯೆಂಬ ಶಾಸ್ತ್ರ, ಕರ್ಣ ಪರ್ವ,15,12
 367.		ಹಿಕ್ಕಳಿಸು, ಹೆಮ್ಮೆ ಪಡು, ಆದಿ ಪರ್ವ,11,28
 368.		ಹಿಕ್ಕು, ಸಿಕ್ಕು ಬಿಡಿಸು, ವಿರಾಟ ಪರ್ವ,1,33
 369.		ಹಿಕ್ಕು, ಛೇದಿಸು, ವಿರಾಟ ಪರ್ವ,7,41
 370.		ಹಿಟ್ಟುಗುಟ್ಟು, ಧ್ವಂಸಮಾಡು, ಉದ್ಯೋಗ ಪರ್ವ,3,104
 371.		ಹಿಡಿಂಬಕನೆಂಬ ಅಸುರಪತಿ, ಹಿಡಿಂಬನೆಂಬ ರಾಕ್ಷಸ ರಾಜ, ಸಭಾ ಪರ್ವ,5,34
 372.		ಹಿಡಿಕಿ, ಹಿಸುಕಿ, ಆದಿ ಪರ್ವ,9,7
 373.		ಹಿಡಿಯಾಳು, ಸೆರೆಯಾಳು, ಆದಿ ಪರ್ವ,19,18
 374.		ಹಿಡಿಹಿಂಗೆ, ನಿಯಂತ್ರಣಕ್ಕೆ, ದ್ರೋಣ ಪರ್ವ,3,37
 375.		ಹಿಡಿಹು, ಹತೋಟಿ, ಆದಿ ಪರ್ವ,19,37
 376.		ಹಿಡುಹು, ಮುಷ್ಠಿ, ಆದಿ ಪರ್ವ,11,28
 377.		ಹಿಣಿಲ, ಜಡೆಯ, ದ್ರೋಣ ಪರ್ವ,6,62
 378.		ಹಿಣಿಲಬಾವುಲಿಗಾರರು, ಶೌರ್ಯದ ಬಿರುದುಗಾರರು., ಭೀಷ್ಮ ಪರ್ವ,4,40
 379.		ಹಿಣಿಲಿರಿದು, ಸಿಕ್ಕು ಬಿಡಿಸಿ, ವಿರಾಟ ಪರ್ವ,6,49
 380.		ಹಿಣಿಲು, ನವಿಲುಗರಿ, ಉದ್ಯೋಗ ಪರ್ವ,11,16
 381.		ಹಿಣಿಲು, ಜಡೆ, ವಿರಾಟ ಪರ್ವ,3,80
 382.		ಹಿಣಿಲು, ಜಡೆಯ ಗಂಟು, ಕರ್ಣ ಪರ್ವ,22,25
 383.		ಹಿಣಿಲು, ಜೊಂಡೆ, ಭೀಷ್ಮ ಪರ್ವ,4,82
 384.		ಹಿಣಿಲು, ಹೆರಳು, ಗದಾ ಪರ್ವ,11,16
 385.		ಹಿಣಿಲುಕರುಳು, ಗೊಂಚಲು ಕರುಳು, ಭೀಷ್ಮ ಪರ್ವ,4,47
 386.		ಹಿನ್ನೆಲೆ, ಹಿಂಭಾಗ, ಆದಿ ಪರ್ವ,15,50
 387.		ಹಿಪ್ಪೆಗರ, ಸತ್ವ ಹೀನರ, ದ್ರೋಣ ಪರ್ವ,2,53
 388.		ಹಿಮ, ಶೀತ, ಆದಿ ಪರ್ವ,9,24
 389.		ಹಿಮಕರ, ಚಂದ್ರ (ಹಿಮವನ್ನುಂಟುಮಾಡುವವ) ಮಹಾನ್ವಯ, ಗದಾ ಪರ್ವ,4,33
 390.		ಹಿಮಕರಕುಲಲಲಾಮ, ಚಂದ್ರ ವಂಶದ ರಾಜಶ್ರೇಷ್ಠರು, ಭೀಷ್ಮ ಪರ್ವ,3, 
 391.		ಹಿಮಾಲಯವಾಗಪರಜಲಧಿ, ಹಿಮಾಲಯದಿಂದ ಸಮುದ್ರದವರೆಗೂ ಹಬ್ಬಿರುವ, ಅರಣ್ಯ ಪರ್ವ,7,42
 392.		ಹಿಮ್ಮಡಿಗೊಗುವ ಕುಂತಳ, ಹಿಮ್ಮಡಿಯನ್ನು ಮುಟ್ಟುತ್ತಿರುವ ಕೂದಲು, ಅರಣ್ಯ ಪರ್ವ,16,22
 393.		ಹಿಮ್ಮೆಟ್ಟು, ಹಿಂದಕ್ಕೆ ಸರಿ, ಆದಿ ಪರ್ವ,15,50
 394.		ಹಿಯ್ಯಾಳಿ, ನಿಂದನೆ, ದ್ರೋಣ ಪರ್ವ,6,18
 395.		ಹಿರಿದು, ಪಿರಿದು , ಆದಿ ಪರ್ವ,2,19
 396.		ಹಿರಿಯುಬ್ಬಣ, ಉಬ್ಬಿದ ಮಾಂಸಖಂಡಗಳು(?), ಗದಾ ಪರ್ವ,2,13
 397.		ಹಿಸುಣ, ಚಾಡಿ, ಉದ್ಯೋಗ ಪರ್ವ,9,18
 398.		ಹಿಸುಣಿಕೆ, ಚಾಡಿ, ಭೀಷ್ಮ ಪರ್ವ,1,19
 399.		ಹಿಳಿ, ಹಿಪ್ಪೆಮಾಡು, ಉದ್ಯೋಗ ಪರ್ವ,3,120
 400.		ಹಿಳಿ, ನಾಶವಾಗು, ದ್ರೋಣ ಪರ್ವ,10,3
 401.		ಹಿಳಿ, ಬಿರಿ, ಭೀಷ್ಮ ಪರ್ವ,4,38
 402.		ಹಿಳಿ, ಸೀಳು, ಕರ್ಣ ಪರ್ವ,24,38
 403.		ಹಿಳಿ, ಕುಸಿ  ಹೇರಾಳಿಸು, ಕರ್ಣ ಪರ್ವ,8,24
 404.		ಹಿಳಿದ, ನಾಶವಾದ, ಅರಣ್ಯ ಪರ್ವ,2,2
 405.		ಹಿಳಿದು, ಹಿಸುಕಿ, ಭೀಷ್ಮ ಪರ್ವ,5,31
 406.		ಹಿಳಿದು ಹಿಂಡು, ಹಿಂಡಿರಸವನ್ನು ತೆಗೆ, ವಿರಾಟ ಪರ್ವ,3,22
 407.		ಹಿಳಿದೆವು, ನಾಶಮಾಡಿದೆವು, ಉದ್ಯೋಗ ಪರ್ವ,1,37
 408.		ಹಿಳಿಯಲಿ, ಕುಂಭ ಸ್ಥಳ, ದ್ರೋಣ ಪರ್ವ,2,27
 409.		ಹಿಳಿಯೆ, ಸಿಡಿಯಲು, ದ್ರೋಣ ಪರ್ವ,9,27
 410.		ಹಿಳುಕು, ಬಾಣಗಳ ಹಿಂತುದಿಯ ಗರಿ, ವಿರಾಟ ಪರ್ವ,8,37
 411.		ಹಿಳುಕು, ಬಾಣದ ಹಿಂಭಾಗದ ಗರಿಭಾಗ, ಭೀಷ್ಮ ಪರ್ವ,8,42
 412.		ಹಿಳುಕು, ಬಾಣದ ಹಿಂದಿನ ಭಾಗ, ಶಲ್ಯ ಪರ್ವ,2,33
 413.		ಹಿಳುಕು, ಬಾಣದ ಗರಿ, ಉದ್ಯೋಗ ಪರ್ವ,11,13
 414.		ಹಿಳುಕು, ಬಾಣದ ಗರಿ, ಸಭಾ ಪರ್ವ,10,68, , ,   ಗುರಿತಾಗಿಸು ,  ಹಿಳುಕಿಡು,   ಬೆಸು ಹರಿಕು,   ಭೇದಿಸು ಇತ್ಯಾದಿ ಪದಗಳು ಬಾಣಸಂಧಾನ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಶಬ್ದಗಳು., 
 415.		ಹಿಳುಕುಗಳು, ಬಾಣದ ಹಿಂಬದಿಯ ಗರಿಗಳು, ಭೀಷ್ಮ ಪರ್ವ,4,20
 416.		ಹೀನ ಇಂದು, ಶುಕ್ಲ ಬಿದಿಗೆ ಚಂದ್ರ ( ಕ್ಷೀಣವಾಗಿರುವ ಚಂದ್ರ), ಭೀಷ್ಮ ಪರ್ವ,4,76
 417.		ಹೀನಗತಿ, ದುರ್ಗತಿ, ಗದಾ ಪರ್ವ,8,30
 418.		ಹೀರಾವಳಿ, ವಜ್ರಸಮೂಹ, ದ್ರೋಣ ಪರ್ವ,1,14
 419.		ಹೀರಾವಳಿ, ವಜ್ರರಾಶಿ, ದ್ರೋಣ ಪರ್ವ,13,3
 420.		ಹೀರಾವಳಿ, ವಜ್ರದ ಸರ, ಕರ್ಣ ಪರ್ವ,15,30
 421.		ಹೀಲಿ, ನವಿಲುಗರಿ, ದ್ರೋಣ ಪರ್ವ,3,6
 422.		ಹೀಲಿ, ನವಿಲುಗರಿಗಳಿಂದ ತಯಾರಿಸಿದ ಉಡುಪು, ಅರಣ್ಯ ಪರ್ವ,5,28
 423.		ಹೀಹಾಳಿ, ನಿಂದೆ, ಕರ್ಣ ಪರ್ವ,11,39
 424.		ಹೀಹಾಳಿ, ಪಂಥ , ವಿರಾಟ ಪರ್ವ,3,34, 
 425.		ಹೀಹಾಳಿ, ಹುರುಡು, ದ್ರೋಣ ಪರ್ವ,15,70
 426.		ಹೀಹಾಳಿ, ಹಠ, ಕರ್ಣ ಪರ್ವ,15,7
 427.		ಹೀಹಾಳಿಕಾರರು, ಸ್ಪರ್ಧೆಯೊಡ್ಡುವವರು., ದ್ರೋಣ ಪರ್ವ,5,82
 428.		ಹುಗಿಲು, ಸೀಳು, ದ್ರೋಣ ಪರ್ವ,5,55
 429.		ಹುಗ್ಗಿಗರು, ಸೊಕ್ಕಿನವರು, ದ್ರೋಣ ಪರ್ವ,10,31
 430.		ಹುಗ್ಗಿಗರು, ಉತ್ಸಾಹಿಗಳು (ಜಂಭಗಾರರು), ಭೀಷ್ಮ ಪರ್ವ,1,58
 431.		ಹುಟ್ಟಿ, ಜೇನು ಹುಟ್ಟಿ, ದ್ರೋಣ ಪರ್ವ,6,40
 432.		ಹುಡಿ, ಪುಡಿ, ದ್ರೋಣ ಪರ್ವ,1,60
 433.		ಹುಡಿ, ದೂಳು, ವಿರಾಟ ಪರ್ವ,3,15
 434.		ಹುದಿದ, ಅಡಗಿದ, ಗದಾ ಪರ್ವ,11,1
 435.		ಹುದು, ನಂಟು , ಗದಾ ಪರ್ವ,8,20, , ,  ಹೊಂದಿಕೆ, 
 436.		ಹುದು, ಹಂಚಿಕೊಂಡು ಬಾಳುವುದು, ಸಭಾ ಪರ್ವ,16,18
 437.		ಹುದು=ಪುದುವು, ಸಾಮೂಹಿಕ ಸ್ವಾಮಿತ್ವ, ಆದಿ ಪರ್ವ,8,48
 438.		ಹುದುಗು, ಮುಚ್ಚಿಕೊಳ್ಳು, ಆದಿ ಪರ್ವ,16,62
 439.		ಹುದುಗು, ಮುಚ್ಚು, ಆದಿ ಪರ್ವ,15,48
 440.		ಹುದುಗು, ಅಡಗಿಕೊಳ್ಳು, ಗದಾ ಪರ್ವ,1,13
 441.		ಹುದುಗು, ಇಂಗಿಹೋಗು, ಅರಣ್ಯ ಪರ್ವ,13,38
 442.		ಹುದುನೆಲ, ಪ್ರೀತಿಯ ನೆಲ , ಶಲ್ಯ ಪರ್ವ,2,54
 443.		ಹುದುವಿನ ಗಂಡತನ, ಐವರು ಒಬ್ಬಳನ್ನು ಹಂಚಿಕೊಂಡಿದ್ದು. ಇಂಥ ಹಂಚಿಕೆಯ ಗಂಡತನ, ವಿರಾಟ ಪರ್ವ,3,43
 444.		ಹುಯ್ಯಲು, ದೂರು, ಅರಣ್ಯ ಪರ್ವ,5,25
 445.		ಹುಯ್ಯಲುಗಾರ, ಬೊಬ್ಬೆಯಿಡುತ್ತಿದ್ದವ, ವಿರಾಟ ಪರ್ವ,5,6
 446.		ಹುರಿ, ಧಾನ್ಯಗಳನ್ನು ಬಾಣಲೆಯಲ್ಲಿ ಹುರಿಯಯುವುದು, ಗದಾ ಪರ್ವ,11,26
 447.		ಹುರಿ ಹುರಿ, ಭೇಷ್ ಭೇಷ್ ಎಂಬ ಕೊಂಡಾಟದ ಮಾತು, ಅರಣ್ಯ ಪರ್ವ,1,31
 448.		ಹುರಿಗೂಡಿ, ಒಂದಾಗಿ, ಭೀಷ್ಮ ಪರ್ವ,1,58
 449.		ಹುರಿಗೊಂಡುದು, ಪ್ರಖರವಾಗಿ ಕಾಣಿಸಿತು, ಗದಾ ಪರ್ವ,8,22
 450.		ಹುರಿಗೊಳ್, ಹುರುಪುಗೊಳ್ಳು ಉತ್ಸಾಹಗೊಳ್ಳು, ಗದಾ ಪರ್ವ,4,6
 451.		ಹುರಿಬಿಡದೆ, ಒಗ್ಗಟ್ಟನ್ನು ಬಿಡದೆ, ದ್ರೋಣ ಪರ್ವ,6,18
 452.		ಹುರಿಯೇರು, ಅಧಿಕವಾಗು, ಗದಾ ಪರ್ವ,7,13
 453.		ಹುರಿಯೇರು, ಹೆಚ್ಚಾಗು/ಬಲವಾಗ, ಕರ್ಣ ಪರ್ವ,25,3
 454.		ಹುರಿಯೊಡೆದು, ಶಕ್ತಿಗುಂದಿ, ದ್ರೋಣ ಪರ್ವ,5,12
 455.		ಹುರಿಯೊಡೆದು, ಒಗ್ಗಟ್ಟು ತಪ್ಪಿ (ಹಿಮ್ಮೆಟ್ಟಿ), ಭೀಷ್ಮ ಪರ್ವ,6,12
 456.		ಹುರುಡಿಗ, ಹೊಟ್ಟೆಕಿಚ್ಚುಪಡುವವನು, ಸಭಾ ಪರ್ವ,1,33
 457.		ಹುರುಡಿಸು, ಆಸೆ ಪಡು, ಅರಣ್ಯ ಪರ್ವ,21,54
 458.		ಹುರುಡೇ, ಸ್ಪರ್ಧೆಯೆ, ದ್ರೋಣ ಪರ್ವ,4,28
 459.		ಹುರುಳುಗೆಟ್ಟುದು, ಸತ್ವಹೀನವಾಯಿತು, ದ್ರೋಣ ಪರ್ವ,5,35
 460.		ಹುರುಳುಗೆಡಿಸು, ಸತ್ವಗುಂದಿಸು, ವಿರಾಟ ಪರ್ವ,8,91
 461.		ಹುರುಳೆನಿಪ, ನೆಲೆಯಾದ, ಭೀಷ್ಮ ಪರ್ವ,3,62
 462.		ಹುಲಿಸಾಯ್ತು, ಹುಲುಸಾಗಿದೆ, ಭೀಷ್ಮ ಪರ್ವ,4,13
 463.		ಹುಲು, ಸಾಮಾನ್ಯ, ವಿರಾಟ ಪರ್ವ,4,34
 464.		ಹುಲು, ಸಣ್ಣ, ಆದಿ ಪರ್ವ,11,23
 465.		ಹುಲು, ಅಲ್ಪ, ವಿರಾಟ ಪರ್ವ,6,28
 466.		ಹುಲು, ಕ್ಷುಲ್ಲಕ, ಆದಿ ಪರ್ವ,15,39
 467.		ಹುಲು, ಕ್ಷುದ್ರ, ವಿರಾಟ ಪರ್ವ,6,47
 468.		ಹುಲುದಳದೊಳಗೆ, ಕ್ಷುಲ್ಲಕ ಸೇನೆಯೊಂದಿಗೆ, ಭೀಷ್ಮ ಪರ್ವ,9,30
 469.		ಹುಲುಮೃಗ, ಕ್ಷುಲ್ಲಕ ಜಿಂಕೆ, ವಿರಾಟ ಪರ್ವ,8,1
 470.		ಹುಲುವಟ್ಟೆ, ಕ್ಷುದ್ರಮಾರ್ಗ, ಉದ್ಯೋಗ ಪರ್ವ,9,13
 471.		ಹುಲುಸಾಯ್ತೆ, ಹುಲುಸಾದ ಬೆಳೆಬಂತೆ, ಗದಾ ಪರ್ವ,7,53
 472.		ಹುಲ್ಲುಕೈ, ಹುಲ್ಲುಹಿಡಿದ, ಆದಿ ಪರ್ವ,19,2
 473.		ಹುಸಿ, ಸುಳ್ಳಾಡುವುದು, ಆದಿ ಪರ್ವ,18,17
 474.		ಹುಸಿಕ, ಸುಳ್ಳುಗಾರ, ಸಭಾ ಪರ್ವ,1,32
 475.		ಹುಳುಕ, <ಪು¿ುಕ, ವಿರಾಟ ಪರ್ವ,2,30, , , 
 476.		ಹುಳುವುದು, ಹುಳುವುದು (ಹುಳ ಸುರಿದೀತು), ವಿರಾಟ ಪರ್ವ,3,13
 477.		ಹೂಟÉ, ತಯಾರಿ, ಭೀಷ್ಮ ಪರ್ವ,8,59
 478.		ಹೂಡಿತು, ನೆಲಸಿದವು, ಭೀಷ್ಮ ಪರ್ವ,9,41
 479.		ಹೂಡಿದೈ, ಉಂಟುಮಾಡಿದೆ., ಭೀಷ್ಮ ಪರ್ವ,6,39
 480.		ಹೂಡು, ಪ್ರಯೋಗಿಸು, ಆದಿ ಪರ್ವ,7,6
 481.		ಹೂಡು, ಪ್ರಾರಂಭಿಸು, ಗದಾ ಪರ್ವ,10,23
 482.		ಹೂಡು, ಸಿದ್ಧಗೊಳಿಸು, ಆದಿ ಪರ್ವ,20,21
 483.		ಹೂಡು, ಕಟ್ಟು, ಉದ್ಯೋಗ ಪರ್ವ,7,6
 484.		ಹೂಡುವನು, ಸೃಷ್ಟಿಸುವನು, ಭೀಷ್ಮ ಪರ್ವ,7,32
 485.		ಹೂಣಿಗ, ಸಾಹಸಿ, ದ್ರೋಣ ಪರ್ವ,5,64
 486.		ಹೂಣಿಗ, ಶಪಥವೀರ, ಭೀಷ್ಮ ಪರ್ವ,7,7
 487.		ಹೂಣಿಗ, ವೀರ , ವಿರಾಟ ಪರ್ವ,7,36
 488.		ಹೂಣಿಗ, ಪ್ರತಿಜ್ಞೆ ಮಾಡಿದವನು, ಗದಾ ಪರ್ವ,2,5
 489.		ಹೂಣಿಗ, ಪ್ರತಿಜ್ಞೆಮಾಡುವವನು, ಶಲ್ಯ ಪರ್ವ,1,26
 490.		ಹೂಣಿಗತನ, ಶಪಥ ಮಾಡುವ ರೀತಿ, ದ್ರೋಣ ಪರ್ವ,16,14
 491.		ಹೂಣು, ಬಾಣ ಹೂಡು, ಆದಿ ಪರ್ವ,7,6
 492.		ಹೂಣು, ಪ್ರತಿಜ್ಞೆಮಾಡು, ಆದಿ ಪರ್ವ,20,40
 493.		ಹೂಣೆ, ನುಗ್ಗು, ದ್ರೋಣ ಪರ್ವ,5,4
 494.		ಹೂಣೆ, ಪ್ರತಿಜ್ಞೆ, ದ್ರೋಣ ಪರ್ವ,4,31
 495.		ಹೂಣೆ, ಛಲ, ವಿರಾಟ ಪರ್ವ,2,39
 496.		ಹೂಣೆಹೊಗು, ಸುತ್ತುಗಟ್ಟಿ ದಾಳಿಮಾಡು, ಕರ್ಣ ಪರ್ವ,13,41
 497.		ಹೂಣೆಹೊಗು, ಶಪಥ ಮಾಡಿ ಮುನ್ನುಗ್ಗು, ಸಭಾ ಪರ್ವ,3,40
 498.		ಹೂತ, ಹೂ ಬಿಟ್ಟ, ಸಭಾ ಪರ್ವ,10,47
 499.		ಹೂತುದು, ಹೂ ಬಿಟ್ಟಿತು, ಭೀಷ್ಮ ಪರ್ವ,10,14
 500.		ಹೂತುದು, ಹೂಬಿಟ್ಟಿತು, ಸಭಾ ಪರ್ವ,1,3
 501.		ಹೂರಿಗೆ, ಪೂರಿಗೆ, ಆದಿ ಪರ್ವ,15,7
 502.		ಹೂಲಿ, ಎಚ್ಚರಿಕೆ, ಅರಣ್ಯ ಪರ್ವ,2,2
 503.		ಹೂವಲಿ, ರಂಗವಲ್ಲಿ (ಯಂತೆ ಮಾಡಿದ ಅಲಂಕಾರ), ವಿರಾಟ ಪರ್ವ,10,47
 504.		ಹೂವಳೆ, (ಹೂ+ಮಳೆ) ಹೂವಿನ ಮಳೆ, ಗದಾ ಪರ್ವ,13,15
 505.		ಹೂಸಕ, ಸುಳ್ಳು, ದ್ರೋಣ ಪರ್ವ,6,20
 506.		ಹೂಸಕ, ತೋರಿಕೆ, ಕರ್ಣ ಪರ್ವ,1,30
 507.		ಹೂಸಿ, ಪೂಸಿಕೊಂಡು, ಗದಾ ಪರ್ವ,1,26
 508.		ಹೂಸಿಕ, ಆಡಂಬರ, ದ್ರೋಣ ಪರ್ವ,16,25
 509.		ಹೂಸು, ಹಚ್ಚು, ಆದಿ ಪರ್ವ,20,60
 510.		ಹೂಸುಕ, ಹೂಸಕ , ಕರ್ಣ ಪರ್ವ,23,44
 511.		ಹೂಹೆ, ಬೊಂಬೆ, ದ್ರೋಣ ಪರ್ವ,5,78
 512.		ಹೂಹೆ, ಮರಿ, ಆದಿ ಪರ್ವ,20,32
 513.		ಹೂಹೆ, ಆಕಾರ, ವಿರಾಟ ಪರ್ವ,9,25
 514.		ಹೂಹೆ, ಗೊಂಬೆ, ವಿರಾಟ ಪರ್ವ,10,66
 515.		ಹೂಳಿದ, ಮರೆಯಾದ, ಅರಣ್ಯ ಪರ್ವ,2,2
 516.		ಹೂಳಿದ, ಹೂತುಹೋದ, ಗದಾ ಪರ್ವ,11,1
 517.		ಹೂಳಿದ, ತುಂಬಿದ, ಉದ್ಯೋಗ ಪರ್ವ,2,14
 518.		ಹೂಳಿದವು, ಆವರಿಸಿದವು, ಭೀಷ್ಮ ಪರ್ವ,8,56
 519.		ಹೂಳು, ತುಂಬು , ಶಲ್ಯ ಪರ್ವ,3,5, ,
 520.		ಹೂಳೆ ಬೀಸಿದ ಗುಳ, ಬಲವಾಗಿ ಅಕ್ಕ ಪಕ್ಕಕ್ಕೆ ಬಿಗಿದ ಹಕ್ಕರಿಕೆ, ಭೀಷ್ಮ ಪರ್ವ,8,44
 521.		ಹೃತ್ಕಮಲ, ಹೃದಯ ಕಮಲ, ಗದಾ ಪರ್ವ,3,43
 522.		ಹೃತ್ಸಂವಾದ, ಮನಸ್ಸಿನ ಸ್ವಗತ, ಭೀಷ್ಮ ಪರ್ವ,1,27
 523.		ಹೃದಯಸಂಚಿತ, ಹೃದಯದಲ್ಲಿ ಶೇಖರಗೊಂಡಿದ್ದ, ಗದಾ ಪರ್ವ,12,25
 524.		ಹೆಕ್ಕಳ, ಪೀಡೆ, ಸಭಾ ಪರ್ವ,11,15
 525.		ಹೆಕ್ಕಳ, ಬಾಧೆ, ಆದಿ ಪರ್ವ,9,3
 526.		ಹೆಕ್ಕಳ, ಸೊಕ್ಕು, ಭೀಷ್ಮ ಪರ್ವ,6,14
 527.		ಹೆಕ್ಕಳವಿಕ್ಕಿದ, ಮೆರೆದಾಡಿದ., ಸಭಾ ಪರ್ವ,13,57
 528.		ಹೆಕ್ಕಳಿಸು, ಹೆಚ್ಚಾಗು , ಗದಾ ಪರ್ವ,1,51, , 
 529.		ಹೆಗ್ಗಹಳೆಗಳು, ದೊಡ್ಡ ಕಹಳೆಗಳು, ಭೀಷ್ಮ ಪರ್ವ,2,4
 530.		ಹೆÉಗ್ಗಾಳೆ, ಒಂದು ವಾದ್ಯ, ದ್ರೋಣ ಪರ್ವ,9,16
 531.		ಹೆಗ್ಗೊಂಬೆ, ಮರದ ದೊಡ್ಡ ಕೊಂಬೆ, ಅರಣ್ಯ ಪರ್ವ,6,22
 532.		ಹೆಚ್ಚಾಳು, ಹಿರಿಮೆಯುಳ್ಳವನು, ಆದಿ ಪರ್ವ,11,21
 533.		ಹೆಚ್ಚಾಳುತನ, ದೊಡ್ಡ ವೀರನೆಂಬ ಭಾವ, ಗದಾ ಪರ್ವ,5,49
 534.		ಹೆಚ್ಚಿ, ಗರ್ವಿಸಿ, ಗದಾ ಪರ್ವ,5,9
 535.		ಹೆಚ್ಚು, ಉಬ್ಬು, ವಿರಾಟ ಪರ್ವ,3,73
 536.		ಹೆಡಗೆ, ಬುಟ್ಟಿ, ಆದಿ ಪರ್ವ,10,25
 537.		ಹೆಡಗೈ, ಹಿಂಗೈ, ವಿರಾಟ ಪರ್ವ,7,35
 538.		ಹೆಡತಲೆ, ಶಿಖರ, ದ್ರೋಣ ಪರ್ವ,1,44
 539.		ಹೆಡತಲೆ, ತಲೆಯ ಹಿಂಭಾಗ., ದ್ರೋಣ ಪರ್ವ,14,21
 540.		ಹೆಡೆತಲೆ, ಕತ್ತಿನ ಹಿಂಭಾಗ, ಉದ್ಯೋಗ ಪರ್ವ,1,20
 541.		ಹೆಣಗು, ಹಿಡಿತದಿಂದ ತಪ್ಪಿಸಿ ಕೊಳ್ಳಲು ಪ್ರಯಾಸಪಡು, ಆದಿ ಪರ್ವ,5,13
 542.		ಹೆಣದಿನಿಹಿ, ಹೆಣಗಳನ್ನು ತಿನ್ನುವವುಗಳು , ಗದಾ ಪರ್ವ,12,4, , , ಭೂತ ,  ಭೇತಾಳ ,  ಶಾಕಿನಿ ಇತ್ಯಾದಿಗಳು, 
 543.		ಹೆದರೆದೆಯ, ಪುಕ್ಕಲ, ದ್ರೋಣ ಪರ್ವ,10,9
 544.		ಹೆಬ್ಬಟ್ಟೆ, ಹೆದ್ದಾರಿ, ಭೀಷ್ಮ ಪರ್ವ,9,38
 545.		ಹೆಬ್ಬಲ, ದೊಡ್ಡ ಸೇನೆ, ದ್ರೋಣ ಪರ್ವ,5,40
 546.		ಹೆಬ್ಬಿದಿರು, ದೊಡ್ಡ ಬೊಂಬು, ಆದಿ ಪರ್ವ,20,57
 547.		ಹೆಬ್ಬೆಳಸು, ಸಮೃದ್ಧ ಬೆಳೆ, ಭೀಷ್ಮ ಪರ್ವ,9,13
 548.		ಹೆಮ್ಮಕ್ಕಳು, ಹೆಣ್ಣುಮಕ್ಕಳು, ಭೀಷ್ಮ ಪರ್ವ,8,31
 549.		ಹೆಮ್ಮಳೆ, ಭಾರಿಯ ಮಳೆ, ಅರಣ್ಯ ಪರ್ವ,12,44
 550.		ಹೆರತೆಗೆ, ಹೊರಬರುವುದು, ಗದಾ ಪರ್ವ,6,23
 551.		ಹೆರದೆಗೆ, ಹಿಂದೆಗೆ , ಗದಾ ಪರ್ವ,7,3
 552.		ಹೆರಸಾರು, ಪಕ್ಕಕ್ಕೆ ಸರಿ, ಗದಾ ಪರ್ವ,7,7
 553.		ಹೆರೆ, ಎಣ್ಣೆ ಹಾಕು, ಕರ್ಣ ಪರ್ವ,8,12
 554.		ಹೇಮಗಿರಿ, ಮೇರುಗಿರಿ, ಆದಿ ಪರ್ವ,18,10
 555.		ಹೇರಂಬ, ಗಣಪತಿ, ಅರಣ್ಯ ಪರ್ವ,6,12
 556.		ಹೇರಡವಿ, ದಟ್ಟಡವಿ, ಭೀಷ್ಮ ಪರ್ವ,5,8
 557.		ಹೇರಾನೆ, ಹಿರಿದಾದ ಆನೆ , ಗದಾ ಪರ್ವ,3,9
 558.		ಹೇರಾಸಿ, ದೊಡ್ಡರಾಸಿ, ದ್ರೋಣ ಪರ್ವ,2,69
 559.		ಹೇರಾಳ, ಅಧಿಕ, ಕರ್ಣ ಪರ್ವ,24,32
 560.		ಹೇರಾಳ, ಧಾರಾಳ, ಆದಿ ಪರ್ವ,10,21
 561.		ಹೇರಿತು, ತುಂಬಿತು, ಗದಾ ಪರ್ವ,7,28, , 
 562.		ಹೇರುಗಳು, ಗಾಯದಿಂದಾದ ತೂತುಗಳು, ಗದಾ ಪರ್ವ,5,40
 563.		ಹೇರುರ, ವಿಶಾಲವಕ್ಷ ಸ್ಥಳ, ಆದಿ ಪರ್ವ,13,37
 564.		ಹೇವ, ದಾಕ್ಷಿಣ್ಯ, ದ್ರೋಣ ಪರ್ವ,6,25
 565.		ಹೇವಗೆಡಿಸಿದವರು, ಅವಮಾನಗೊಳಿಸಿದವರು, ಸಭಾ ಪರ್ವ,16,10
 566.		ಹೇವಮಾರಿ, ಮಾನಗೇಡಿ, ಕರ್ಣ ಪರ್ವ,4,27
 567.		ಹೇವರಿಸು, ಅಸಹ್ಯ ಪಡು, ಕರ್ಣ ಪರ್ವ,19,54
 568.		ಹೇಷಾನಿನದ, ಕೆನೆತ, ಭೀಷ್ಮ ಪರ್ವ,4,98
 569.		ಹೇಷಾರವ, ಕುದುರೆಗಳ ಧ್ವನಿ, ವಿರಾಟ ಪರ್ವ,10,54
 570.		ಹೇಷಿತರವ, ಕುದುರೆಗಳು ಕೆನೆಯುವ ಸದ್ದು, ಭೀಷ್ಮ ಪರ್ವ,2,3
 571.		ಹೇಳಿಕೆ ಆಯ್ತು, ಸುದ್ದಿ ಹಬ್ಬಿತು, ಭೀಷ್ಮ ಪರ್ವ,6,4
 572.		ಹೇಳಿಕೆ ಆಯ್ತು, ಅಪ್ಪಣೆ ಆಯಿತು, ಭೀಷ್ಮ ಪರ್ವ,9,50
 573.		ಹೇಳಿಗೆ, (ಹಾವುಗಳನ್ನಿಡುವ) ಬಿದಿರಿನ ಬುಟ್ಟಿ, ಕರ್ಣ ಪರ್ವ,1,1
 574.		ಹೇಳಿಗೆ, ಬುಟ್ಟಿ, ಸಭಾ ಪರ್ವ,16,24
 575.		ಹೈಡಿಂಬ, ಘಟೋತ್ಕಚ, ದ್ರೋಣ ಪರ್ವ,3,21
 576.		ಹೊಂಗರಿ, ಚಿನ್ನದಗರಿ (ಬಾಣದ ಹಿಂದಿನ ಗರಿ) ಬಾಯಿಧಾರೆ, ಶಲ್ಯ ಪರ್ವ,3,65
 577.		ಹೊಂಗಿದ, ಉಬ್ಬಿದ, ದ್ರೋಣ ಪರ್ವ,1,22
 578.		ಹೊಂಗು, ಹಿಗ್ಗು., ಉದ್ಯೋಗ ಪರ್ವ,8,8
 579.		ಹೊಂಗು, ಉಬ್ಬು, ವಿರಾಟ ಪರ್ವ,1,28
 580.		ಹೊಂಗು, ಉಕ್ಕಿಚಿಮ್ಮು, ಆದಿ ಪರ್ವ,16,62
 581.		ಹೊಂಗು, ಹೊಮ್ಮು ಉಬ್ಬು, ಭೀಷ್ಮ ಪರ್ವ,3,72
 582.		ಹೊಂಗು, ದೊಡ್ಡದಾಗು, ಆದಿ ಪರ್ವ,13,25
 583.		ಹೊಂಗೊಡ, ಬಂಗಾರದ ಕೊಡ, ದ್ರೋಣ ಪರ್ವ,1,37
 584.		ಹೊಂತಕಾರಿ, ವೀರರು, ಕರ್ಣ ಪರ್ವ,10,9
 585.		ಹೊಂತಕಾರಿ, ಚತುರರು, ದ್ರೋಣ ಪರ್ವ,12,7
 586.		ಹೊಂದಂಡಿಗೆ, ಬಂಗಾರದ ಪಲ್ಲಕ್ಕಿ, ದ್ರೋಣ ಪರ್ವ,8,55
 587.		ಹೊಂದಾಳ, ಚಿನ್ನದ ಬಣ್ಣದ ತಾಳ, ವಿರಾಟ ಪರ್ವ,6,58
 588.		ಹೊಂದಿಕೆ ಬಿರುಬು, ಕಾಠಿಣ್ಯ , ಶಲ್ಯ ಪರ್ವ,2,26
 589.		ಹೊಂಪುಳಿ, ಪುಲಕಿತ, ಆದಿ ಪರ್ವ,13,61
 590.		ಹೊಂಪುಳಿಯೋದನು, ರೋಮಾಂಚಗೊಂಡನು., ಭೀಷ್ಮ ಪರ್ವ,7,17
 591.		ಹೊಂಪುಳಿವೋಗಿ, ರೋಮಾಂಚನ , ಅರಣ್ಯ ಪರ್ವ,11,5
 592.		ಹೊಂಬರಹ, ಚಿನ್ನದ ರೇಖೆಗಳಲ್ಲಿನ ಬರಹ, ಗದಾ ಪರ್ವ,5,41
 593.		ಹೊಂಬಳಿ, ಚಿನ್ನವನ್ನು ಲೇಪಿಸಿದ ವಸ್ತ್ರ (ಪಳಿ, ಗದಾ ಪರ್ವ,4,14
 594.		ಹೊಂಬಾಳೆ, ಅಡಕೆ ಅಥವಾ ತೆಂಗಿನ ಹೂವಿನ ಗೊಂಚಲು, ಆದಿ ಪರ್ವ,12,11
 595.		ಹೊಂಬೆಳೆ, ಹೊನ್ನಿನ ಬೆಳೆ, ಆದಿ ಪರ್ವ,16,64
 596.		ಹೊಕ್ಕರು, ಪ್ರವೇಶಿಸಿದರು, ಆದಿ ಪರ್ವ,11,0
 597.		ಹೊಕ್ಕವರು, ಮುನ್ನುಗ್ಗಿದವರು, ಭೀಷ್ಮ ಪರ್ವ,4,43
 598.		ಹೊಕ್ಕು, ರಣರಂಗ ಪ್ರವೇಶಿಸಿ, ಭೀಷ್ಮ ಪರ್ವ,1,22
 599.		ಹೊಕ್ಕುದು, ಮುನ್ನುಗ್ಗಿತು, ಭೀಷ್ಮ ಪರ್ವ,4,34
 600.		ಹೊಗರಿಡುತ್ತ, ಉರಿಬೀರುತ್ತಾ, ಭೀಷ್ಮ ಪರ್ವ,9,39
 601.		ಹೊಗರಿನ, ಕಾಂತಿಯ, ದ್ರೋಣ ಪರ್ವ,3,56
 602.		ಹೊಗರುತೀಡು, ಫಳಫಳಗೊಳಿಸು, ಭೀಷ್ಮ ಪರ್ವ,4,94
 603.		ಹೊಗರೇರಿತು, ಕಳೆಯೇರಿತು, ಭೀಷ್ಮ ಪರ್ವ,10,14
 604.		ಹೊಗರೇಳು, ಉತ್ಸಾಹಿತನಾಗು, ಕರ್ಣ ಪರ್ವ,13,22
 605.		ಹೊಗರೊಗು, ಕಾಂತಿ ಸೂಸು, ವಿರಾಟ ಪರ್ವ,7,32
 606.		ಹೊಗಲಿ, ಪ್ರವೇಶಿಸಲಿ, ಭೀಷ್ಮ ಪರ್ವ,8,21
 607.		ಹೊಗಳು, ವರ್ಣಿಸು, ವಿರಾಟ ಪರ್ವ,5,9
 608.		ಹೊಗಳು<ಪುಗಳ್ ಹಳೆಗನ್ನಡದಲ್ಲಿ ಪುಗಳ್, ಹೊಗಳು ಎಂದರೆ ವಿವರ ಹೇಳು ಎಂದರ್ಥ ಅಷ್ಟೇ. ಈಗಲೂ ಸಬ್ ರಿಜಿಸ್ಟ್ರಾರರ ಕಛೇರಿಯಲ್ಲಿ ಜಮೀನಿನ ಚೆಕ್ಕು ಬಂದಿ ಇತ್ಯಾದಿಗಳನ್ನು ಹೊU, ವಿರಾಟ ಪರ್ವ,5,9
 609.		ಹೊಗಿಸು, ಹೋಗುವಂತೆ ಮಾಡು , ಗದಾ ಪರ್ವ,5,25, 
 610.		ಹೊಗು, ಪ್ರವೇಶಿಸು., ಗದಾ ಪರ್ವ,3,39
 611.		ಹೊಗುವತ್ತ, ಹೋದ ಕಡೆಗೆ, ದ್ರೋಣ ಪರ್ವ,1,2
 612.		ಹೊಗೆದನು, ಹೊಗೆಯಾಡಿದನು, ಭೀಷ್ಮ ಪರ್ವ,9,7
 613.		ಹೊಗೆದುದಂಬರ, ಆಕಾಶದಲ್ಲಿ ಹೊಗೆ ಕಾಣಿಸಿತು, ವಿರಾಟ ಪರ್ವ,4,29
 614.		ಹೊಗೆದುದು, ಹೊಗೆ ತುಂಬಿತು, ಸಭಾ ಪರ್ವ,1,1
 615.		ಹೊಗೆದುದು, ಕಾಂತಿಹೀನವಾಯ್ತು, ಆದಿ ಪರ್ವ,8,91
 616.		ಹೊಗೆದೆಗೆದ, ಹೊಗೆಯಿಂದಾದ ಕಪ್ಪನ್ನು ತೆಗೆದು ಶುದ್ಧೀಕರಿಸಿದ, ಶಲ್ಯ ಪರ್ವ,2,6
 617.		ಹೊಗೆವಂದು, ಹೊಗೆ ಕಾರುವ ಹಾಗೆ (ಸುಡುವ) ಖತಿ, ಭೀಷ್ಮ ಪರ್ವ,9,22
 618.		ಹೊಗೆವೆರಸಿ, (ಹೊಗೆ+ಬೆರಸಿ), ಗದಾ ಪರ್ವ,11,67
 619.		ಹೊಟ್ಟನೂಕಿ, ಜಳ್ಳಿನಂತಿರುವ ರಾಜರನ್ನು ಮುಂದೆ ನೂಕಿ ಇಟ್ಟಳಿಸು ಆಕ್ರಮಿಸು, ಕರ್ಣ ಪರ್ವ,11,34
 620.		ಹೊಟ್ಟುಗ, ಬಲಹೀನ, ದ್ರೋಣ ಪರ್ವ,5,43
 621.		ಹೊಟ್ಟುಗರ, ಸತ್ವವಿಲ್ಲದವರ, ದ್ರೋಣ ಪರ್ವ,2,71
 622.		ಹೊಟ್ಟುಗುಟ್ಟು, ವ್ಯರ್ಥಾಲಾಪ ಮಾಡು. ಬತ್ತವನ್ನು ಕುಟ್ಟಿದರೆ ಅಕ್ಕಿ ಬರುತ್ತದೆ. ಬರಿಯ ತವುಡನ್ನೇ ಕುಟ್ಟಿದರೆ....? ಇದೊಂದು ನಾಣ್ಣುಡಿ., ವಿರಾಟ ಪರ್ವ,6,17
 623.		ಹೊಟ್ಟೆ ಹೊರೆಕ, ವೃಥಾ ಹೊಟ್ಟೆ ಹೊರೆಯುವವರು, ದ್ರೋಣ ಪರ್ವ,10,58
 624.		ಹೊಡಕರಿಸಿ, ಸ್ಫೂರ್ತಿಗೊಂಡು, ಭೀಷ್ಮ ಪರ್ವ,9,18
 625.		ಹೊಡಕರಿಸು, ಮುಖತೋರಿಸು , ಗದಾ ಪರ್ವ,5,43
 626.		ಹೊಡಮರಳಿ, ಹೊರಳು , ವಿರಾಟ ಪರ್ವ,3,17
 627.		ಹೊಡವಂಟು, ಪೊಡಮಟ್ಟು, ಶಲ್ಯ ಪರ್ವ,3,31
 628.		ಹೊಡವಂಡಿಸು, ನಮಸ್ಕಾರ ಮಾಡಿಸು, ಆದಿ ಪರ್ವ,16,7
 629.		ಹೊಡೆ, ಪೈರಿನಲ್ಲಿ ತೆನೆ ಬರುವುದಕ್ಕಿಂತ ಮೊದಲಿನ ಸ್ಥಿತಿ, ಆದಿ ಪರ್ವ,16,64
 630.		ಹೊಡೆ ಮರಳಿದ, ಅಡಿ ಮೇಲಾದ, ಭೀಷ್ಮ ಪರ್ವ,8,18
 631.		ಹೊಡೆ ಮರಳೆ, ಬುಡ ಮೇಲಾಗು, ದ್ರೋಣ ಪರ್ವ,15,36
 632.		ಹೊಡೆಗೆಡೆ, ಉದ್ದಕ್ಕೆ ಬೀಳು, ದ್ರೋಣ ಪರ್ವ,10,10
 633.		ಹೊಡೆಗೆಡೆದವು, ಕೆಳಕ್ಕೆ ಬೀಳಿಸಿದವು, ಭೀಷ್ಮ ಪರ್ವ,4,14
 634.		ಹೊಡೆಗೊಳಿಸಲು, ಅಪ್ಪಳಿಸಲು, ಭೀಷ್ಮ ಪರ್ವ,4,28
 635.		ಹೊಡೆಮಗುಳ್, ಚೇತರಿಸು, ಕರ್ಣ ಪರ್ವ,24,57
 636.		ಹೊಡೆಮರಳು, ತಿರುಗು, ವಿರಾಟ ಪರ್ವ,6,64
 637.		ಹೊಡೆಸೆಂಡು, ಚಂಡಿನಲ್ಲಿ ಹೊಡೆದಾಡುವ ಆಟ, ಶಲ್ಯ ಪರ್ವ,3,11
 638.		ಹೊಣಕಿಗರು, ಹೋರಾಟಗಾರರು, ಭೀಷ್ಮ ಪರ್ವ,4,21
 639.		ಹೊಣಕೆ, ಏರಾಟ, ದ್ರೋಣ ಪರ್ವ,15,60
 640.		ಹೊಣಕೆ, ಕಾಳಗ, ಗದಾ ಪರ್ವ,4,38
 641.		ಹೊಣಕೆಯಿಂದ, ಶಪಥಪೂರ್ಣನಾಗಿ, ಭೀಷ್ಮ ಪರ್ವ,8,26
 642.		ಹೊಣೆ, ಜವಾಬ್ದಾರಿ (ಇಲ್ಲಿ 'ಸೇಡು' ಎಂಬರ್ಥ) ಸೂಠಿ, ಗದಾ ಪರ್ವ,10,16
 643.		ಹೊಣೆಗಾರ, ಜವಾಬ್ದಾರ, ಆದಿ ಪರ್ವ,9,11
 644.		ಹೊತ್ತ ಅಸು, ಹೊತ್ತ ಜೀವ, ವಿರಾಟ ಪರ್ವ,4,38
 645.		ಹೊತ್ತು, ಪ್ರಾಪ್ತ, ಆದಿ ಪರ್ವ,11,3
 646.		ಹೊತ್ತುಗಳೆ, ಕಾಲ ಕಳೆ, ಆದಿ ಪರ್ವ,15,20
 647.		ಹೊದಕುಳಿ, ಬೇಗುದಿ, ಆದಿ ಪರ್ವ,8,3
 648.		ಹೊದರ, ಗುಂಪಿನ, ದ್ರೋಣ ಪರ್ವ,2,70
 649.		ಹೊದರಡಿಸಿ, ಗುಂಪಾಗಿ ಸೇರಿ, ಭೀಷ್ಮ ಪರ್ವ,9,37
 650.		ಹೊದರಹೊಯಿಲಿನಲ್ಲಿ, ಸಮೂಹವನ್ನು ಹರಡಿ, ಭೀಷ್ಮ ಪರ್ವ,3,66
 651.		ಹೊದರಿನ ಹೊರಳಿ, (ಆಭರಣಗಳ) ಗುಂಪಿನ ಕಾಂತಿ., ವಿರಾಟ ಪರ್ವ,10,10
 652.		ಹೊದರಿನ ಹೊರಳಿ, ಹಿಂಡು ಹಿಂಡಾಗುವ, ವಿರಾಟ ಪರ್ವ,4,34
 653.		ಹೊದರು, ಪೊದರು, ಗದಾ ಪರ್ವ,2,12
 654.		ಹೊದರು, ದಟ್ಟ, ಆದಿ ಪರ್ವ,20,27
 655.		ಹೊದರುದೆಗೆ, ಪ್ರಕಾಶಿಸು, ಶಲ್ಯ ಪರ್ವ,2,26
 656.		ಹೊದರೆದ್ದು ಮುಗಿದ, ಗುಂಪು ಗುಂಪಾಗಿ ಮುಗ್ಗರಿಸಿದ, ಭೀಷ್ಮ ಪರ್ವ,6,3
 657.		ಹೊದರೇಳು, ಹೊದ¾ು +ಏಳು = ಗುಂಪಾಗು, ವಿರಾಟ ಪರ್ವ,6,63
 658.		ಹೊದಸು, ಮುಚ್ಚು, ಕರ್ಣ ಪರ್ವ,17,1
 659.		ಹೊದೆ, ಬತ್ತಳಿಕೆ, ಶಲ್ಯ ಪರ್ವ,3,67
 660.		ಹೊದೆ, ಕಟ್ಟು, ಕರ್ಣ ಪರ್ವ,18,20
 661.		ಹೊದೆ, ಕಟ್ಟುಗಳು, ಶಲ್ಯ ಪರ್ವ,2,34
 662.		ಹೊದೆ, ಕೈಗವಸು, ಭೀಷ್ಮ ಪರ್ವ,4,12
 663.		ಹೊದೆಗಳ ಕೆದರಿ, ಕಟ್ಟನ್ನು ಬಿಚ್ಚಿ, ಭೀಷ್ಮ ಪರ್ವ,8,34
 664.		ಹೊದೆಗೆದರಿ, ಬತ್ತಳಿಕೆಯಿಂದ ಹೊರಬಿದ್ದು, ದ್ರೋಣ ಪರ್ವ,1,58
 665.		ಹೊದೆಗೆದರು, ಎಲ್ಲೆಡೆ ಹರಡು, ಕರ್ಣ ಪರ್ವ,13,22
 666.		ಹೊದೆಸಿದವು, ಆವರಿಸಿದವು, ಭೀಷ್ಮ ಪರ್ವ,9,37
 667.		ಹೊದ್ದದೆ, ಹೋಗದೆ, ಆದಿ ಪರ್ವ,8,93
 668.		ಹೊದ್ದಿ, ಸಮೀಪಿಸಿ, ದ್ರೋಣ ಪರ್ವ,1,21
 669.		ಹೊದ್ದಿಗ, ಹತ್ತಿರದವನು, ಭೀಷ್ಮ ಪರ್ವ,8,21
 670.		ಹೊದ್ದಿತಕೆ, ಹಿಡಿದುದಕ್ಕೆ , ಗದಾ ಪರ್ವ,7,53
 671.		ಹೊದ್ದಿದನು, ಸೇರಿದನು, ಭೀಷ್ಮ ಪರ್ವ,7,4
 672.		ಹೊದ್ದಿದರು, ಬಳಿ ಸಾರಿದರು, ಭೀಷ್ಮ ಪರ್ವ,4,74
 673.		ಹೊದ್ದಿಸು, ಅನ್ವಯಿಸು, ವಿರಾಟ ಪರ್ವ,6,25
 674.		ಹೊದ್ದು, (ಪೊರ್ದು) ಉಂಟಾಗು , ವಿರಾಟ ಪರ್ವ,2,25
 675.		ಹೊದ್ದು, ಹತ್ತಿರಬಾ, ವಿರಾಟ ಪರ್ವ,10,68
 676.		ಹೊನಲುಗಿಡಿ, ಕಿಡಿಗಳ ಪ್ರವಾಹ, ಆದಿ ಪರ್ವ,11,33
 677.		ಹೊನ್ನ ಸಾರಿ, ಚಿನ್ನದ ಪಗಡೆಕಾಯಿ, ವಿರಾಟ ಪರ್ವ,1,17
 678.		ಹೊನ್ನಾಯುಗ, ಚಿನ್ನದ ಹಿಡಿಕೆ, ವಿರಾಟ ಪರ್ವ,6,35
 679.		ಹೊಮ್ಮಿಣಿ, ಚಿನ್ನದ ಬಣ್ಣದ ಹಗ್ಗ, ಸಭಾ ಪರ್ವ,12,97
 680.		ಹೊಯ್, ವರ್ಷಿಸು, ಕರ್ಣ ಪರ್ವ,13,4
 681.		ಹೊಯಿ, ಹೊಡಿ, ಭೀಷ್ಮ ಪರ್ವ,4,31
 682.		ಹೊಯಿದಾಡಿದರು, ಹೋರಾಡಿದರು, ಭೀಷ್ಮ ಪರ್ವ,4,71
 683.		ಹೊಯಿಲಿನ, ಶಬ್ದದ, ಭೀಷ್ಮ ಪರ್ವ,4,10
 684.		ಹೊಯಿಲು, ಪೆಟ್ಟಿನ ದನಿ, ಭೀಷ್ಮ ಪರ್ವ,4,78
 685.		ಹೊಯ್ಕಂಬಿ, ಹೊಡೆಯುವ ಕೋಲು, ಆದಿ ಪರ್ವ,7,16
 686.		ಹೊಯ್‍ಕೆಯ್, ಸರಿಸಮಾನ, ದ್ರೋಣ ಪರ್ವ,3,34
 687.		ಹೊಯ್ಕೈಯ್, ಸರಿಸಮಾನ, ಸಭಾ ಪರ್ವ,13,27
 688.		ಹೊಯ್ಗಳು, ಹೊಡೆತಗಳು, ಗದಾ ಪರ್ವ,6,20
 689.		ಹೊಯ್ದಾಡಿ, ಯುದ್ಧಮಾಡಿ, ಭೀಷ್ಮ ಪರ್ವ,9,36
 690.		ಹೊಯ್ದಾಡಿ, ಹೊಡೆದಾಡಿ, ಕರ್ಣ ಪರ್ವ,3,0
 691.		ಹೊಯ್ದು, ಸದೆಬಡಿದು, ಭೀಷ್ಮ ಪರ್ವ,1,22
 692.		ಹೊಯ್ದು, ಪೆಟ್ಟು ನೀಡು, ಉದ್ಯೋಗ ಪರ್ವ,4,87
 693.		ಹೊಯ್ಯು, ಬಲಿಹಾಕು., ಶಲ್ಯ ಪರ್ವ,3,42
 694.		ಹೊಯ್ಲ, ಹೊಯ್ಯುವಿಕೆಯನ್ನು, ಸಭಾ ಪರ್ವ,1,74
 695.		ಹೊಯ್ಲ, ಹೊಡೆತದ, ಗದಾ ಪರ್ವ,6,30
 696.		ಹೊಯ್ಲ ಹೊದರೆದ್ದವು, ಹೊಡೆತಗಳು ಅಧಿಕವಾದುವು, ಸಭಾ ಪರ್ವ,2,108
 697.		ಹೊಯ್ಲ ಹೋರಟೆ, ಹೊಡೆತದ ಆರ್ಭಟ, ವಿರಾಟ ಪರ್ವ,3,89
 698.		ಹೊಯ್ಲಲಿ, ಏಟಿನಿಂದ, ದ್ರೋಣ ಪರ್ವ,5,2
 699.		ಹೊಯ್ಲಿನ, ಪ್ರಹಾರದ, ಭೀಷ್ಮ ಪರ್ವ,4,37
 700.		ಹೊರಗುಂದಿದರು, ಹೊರಗುಳಿದರು (?), ಆದಿ ಪರ್ವ,14,25
 701.		ಹೊರಗುಗಣೆ, ಬಾಣಗಳ ಹೊರಭಾಗ, ಶಲ್ಯ ಪರ್ವ,3,5
 702.		ಹೊರಬಾಹೆ, ಆಚಿನ , ಗದಾ ಪರ್ವ,6,28
 703.		ಹೊರಬಾಹೆ, ಹೊರಭಾಗ, ಆದಿ ಪರ್ವ,7,65
 704.		ಹೊರಬಿಗ, ಹೊರಗಡೆಯವನು, ಗದಾ ಪರ್ವ,6,19
 705.		ಹೊರಬಿನೊಳು, ಉತ್ಸಾಹದಲ್ಲಿ, ದ್ರೋಣ ಪರ್ವ,6,59
 706.		ಹೊರಬೀಸಿ, ತನ್ನ ದೇಹದ ಹೊರಕ್ಕೆ ಬೀಸುವಂತೆ ಮಾಡಿ, ಗದಾ ಪರ್ವ,6,31
 707.		ಹೊರಬೀಳು, ಪಾರಾಗು, ಆದಿ ಪರ್ವ,8,21
 708.		ಹೊರವಂಟ, ಹೊರಟ, ಗದಾ ಪರ್ವ,11,15
 709.		ಹೊರವಂಡಿಸು, ಹೊರಡಿಸು, ಆದಿ ಪರ್ವ,10,29
 710.		ಹೊರವಡಿಸು, ಹೊರಗೆ ಓಡಿಸು, ವಿರಾಟ ಪರ್ವ,5,17
 711.		ಹೊರಳಿ, ಸಮೂಹ , ವಿರಾಟ ಪರ್ವ,2,50, ,
 712.		ಹೊರಳಿ ಹೊದರು, ಸಮೂಹ ಒಗ್ಗೂಡು, ಭೀಷ್ಮ ಪರ್ವ,2,12
 713.		ಹೊರಳಿಗಟ್ಟು, ಒಟ್ಟುಸೇರು, ಕರ್ಣ ಪರ್ವ,4,28
 714.		ಹೊರಳಿಚು, ಮಗ್ಗುಲು ಸರಿಸು, ವಿರಾಟ ಪರ್ವ,8,91
 715.		ಹೊರಳಿತು, ಹಿಂದಕ್ಕೆ ಸರಿಯಿತು, ಭೀಷ್ಮ ಪರ್ವ,9,12
 716.		ಹೊರಳಿಯ ನರವ, ನರಸಮೂಹವ, ಭೀಷ್ಮ ಪರ್ವ,5,33
 717.		ಹೊರಳಿಸು, ನೆಲದ ಮೇಲೆ ಹೊರಳಾಡಿಸು, ಶಲ್ಯ ಪರ್ವ,3,76
 718.		ಹೊರಿಗೆ, ಪದರ, ಗದಾ ಪರ್ವ,7,31
 719.		ಹೊರಿಗೆ, ಜವಾಬ್ದಾರಿ., ಉದ್ಯೋಗ ಪರ್ವ,4,117
 720.		ಹೊರಿಗೆ, ಹೊಣೆ, ಸಭಾ ಪರ್ವ,1,41
 721.		ಹೊರಿಗೆ, ಕೆಲಸ , ಗದಾ ಪರ್ವ,9,11
 722.		ಹೊರಿಗೆವಾಳ, ರಕ್ಷಕ, ಅರಣ್ಯ ಪರ್ವ,16,18
 723.		ಹೊರಿಸು, ಹೊರೆಯನ್ನು ಹಾಕು, ಗದಾ ಪರ್ವ,11,59
 724.		ಹೊರುವೆನು, ಸೈರಿಸುವೆನು, ಭೀಷ್ಮ ಪರ್ವ,10,5
 725.		ಹೊರೆ, ಸಲಹು, ಉದ್ಯೋಗ ಪರ್ವ,10,32
 726.		ಹೊರೆ, ಪೋಷಿಸು, ಆದಿ ಪರ್ವ,10,15
 727.		ಹೊರೆ, ಪೊರೆ, ವಿರಾಟ ಪರ್ವ,10,38
 728.		ಹೊರೆ, ಕಟ್ಟು, ಗದಾ ಪರ್ವ,4,14
 729.		ಹೊರೆಗೆ, ಸಮೀಪಕ್ಕೆ., ಗದಾ ಪರ್ವ,4,28
 730.		ಹೊರೆದ, ಲೇಪಿಸಿದ, ಆದಿ ಪರ್ವ,15,35
 731.		ಹೊರೆದವನ, ಪೋಷಿಸಿದವರ, ಭೀಷ್ಮ ಪರ್ವ,8,66
 732.		ಹೊರೆದು, ಕಾಪಾಡಿ., ವಿರಾಟ ಪರ್ವ,10,20
 733.		ಹೊರೆದೆಗೆದು, ಹಗುರ ಮಾಡಿ, ಗದಾ ಪರ್ವ,11,10
 734.		ಹೊರೆಯಲು, ಕಾಪಾಡಲು, ಉದ್ಯೋಗ ಪರ್ವ,4,60
 735.		ಹೊರೆಯೇರಿ, ಉಬ್ಬಿ, ಭೀಷ್ಮ ಪರ್ವ,7,34
 736.		ಹೊರೆಯೇರು, ಪುಳಕಗೊಳ್ಳು, ಅರಣ್ಯ ಪರ್ವ,5,1
 737.		ಹೊರೆಯೇರು, ಆನಂದವನ್ನು ಹೊಂದು, ದ್ರೋಣ ಪರ್ವ,1,22
 738.		ಹೊರೆಯೊಳಗೆ, ಸಮೀಪದಲ್ಲಿ, ಭೀಷ್ಮ ಪರ್ವ,3,62
 739.		ಹೊರೆವ, ರಕ್ಷಿಸುವ, ಭೀಷ್ಮ ಪರ್ವ,7,16
 740.		ಹೊರೆವವರು, ಕಾಪಾಡುವವರು., ಗದಾ ಪರ್ವ,11,54
 741.		ಹೊರೆಹೊಗದೆ, ಮೋಸಹೋಗದೆ, ಆದಿ ಪರ್ವ,18,2
 742.		ಹೊರೆಹೊಗದೆ, ದಾಕ್ಷಿಣ್ಯವಿಲ್ಲದೆ, ದ್ರೋಣ ಪರ್ವ,1,39
 743.		ಹೊಲಗೆ, ಹೊಲಿಗೆ, ದ್ರೋಣ ಪರ್ವ,12,8
 744.		ಹೊಲಬು, ನೆಲೆ, ಉದ್ಯೋಗ ಪರ್ವ,4,13
 745.		ಹೊಲಬುಗೆಡಿಸು, ದಿಕ್ಕುತಪ್ಪಿಸು, ಶಲ್ಯ ಪರ್ವ,3,57
 746.		ಹೊಲಬುಹೊದ್ದದ, ತನ್ನ ನೆಲೆ ಕಾಣಿಸದ, ಭೀಷ್ಮ ಪರ್ವ,3,65
 747.		ಹೊಲೆ, ಮಲಿನತೆ, ಭೀಷ್ಮ ಪರ್ವ,3,48
 748.		ಹೊಲೆಯ, ಅಸ್ಪøಶ್ಯ, ಭೀಷ್ಮ ಪರ್ವ,3,48
 749.		ಹೊಲ್ಲೆಹ, ನೀಚತನ., ಗದಾ ಪರ್ವ,9,7
 750.		ಹೊಲ್ಲೆಹ, ರೀತಿ/ಬಗೆ, ಉದ್ಯೋಗ ಪರ್ವ,3,124
 751.		ಹೊಲ್ಲೆಹ, ಕೆಟ್ಟದ್ದು, ಆದಿ ಪರ್ವ,19,33
 752.		ಹೊಲ್ಲೆಹವು, ಅಧರ್ಮವಾದುದು, ಭೀಷ್ಮ ಪರ್ವ,7,30
 753.		ಹೊಲ್ಲೆಹವೆ, ತಪ್ಪೆ ?, ವಿರಾಟ ಪರ್ವ,9,18
 754.		ಹೊಳಕು, ಪ್ರಕಾಶಿಸು, ವಿರಾಟ ಪರ್ವ,4,32
 755.		ಹೊಳಕು, ಕಾಣಿಸು, ಆದಿ ಪರ್ವ,7,32
 756.		ಹೊಳಕೆಗಳೊ, ಕಾಂತಿಯೋ, ಭೀಷ್ಮ ಪರ್ವ,1,47
 757.		ಹೊಳಲ ಪರಿವಾರ, ಕಾವಲು ಸೇನೆ, ಭೀಷ್ಮ ಪರ್ವ,1,8
 758.		ಹೊಳಲು, ಪಟ್ಟಣ., ವಿರಾಟ ಪರ್ವ,1,22
 759.		ಹೊಳಹು, ಹೊಳಪು, ಆದಿ ಪರ್ವ,16,3
 760.		ಹೊಳಹು ದೂವಾಳಿ, ಕುದುರೆಯ ಗತಭೇದಗಳು, ಕರ್ಣ ಪರ್ವ,14,35
 761.		ಹೊಳಹುಮಿಗೆ, ಕಾಂತಿ ಉಕ್ಕಲು, ವಿರಾಟ ಪರ್ವ,10,51
 762.		ಹೊಳೆ, ಪ್ರಕಾಶಿಸು, ಆದಿ ಪರ್ವ,13,63
 763.		ಹೊಳ್ಳಾಗದು, ಸುಳ್ಳಾಗದು, ದ್ರೋಣ ಪರ್ವ,8,51
 764.		ಹೊಳ್ಳಿಸಬಹುದೆ, ಪಡೆದುಕೊಳ್ಳಬಹುದೆ, ದ್ರೋಣ ಪರ್ವ,3,49
 765.		ಹೊಳ್ಳಿಸಿ, ಹೋಳುಮಾಡಿ, ದ್ರೋಣ ಪರ್ವ,2,33
 766.		ಹೊಳ್ಳಿಸು, ಖಾಲಿಮಾಡು, ವಿರಾಟ ಪರ್ವ,7,14
 767.		ಹೊಳ್ಳಿಸುತ್ತಿದೆ, ಬಲಗುಂದಿಸುತ್ತಿದೆ, ಭೀಷ್ಮ ಪರ್ವ,10,4
 768.		ಹೊಳ್ಳಿಸೆ, ಹೊರಳಿಸುತ್ತ, ಭೀಷ್ಮ ಪರ್ವ,4,33
 769.		ಹೊಳ್ಳು, ನಿಸ್ಸತ್ವ, ದ್ರೋಣ ಪರ್ವ,2,47
 770.		ಹೊಳ್ಳು, ನಿಷ್ಪ್ರಯೋಜಕ, ಆದಿ ಪರ್ವ,14,34
 771.		ಹೊಳ್ಳು, ಪೊಟರೆ, ಆದಿ ಪರ್ವ,19,23
 772.		ಹೊಳ್ಳುಗ, ಟೊಳ್ಳಾಗಿರುವವರು, ಕರ್ಣ ಪರ್ವ,24,40
 773.		ಹೊಳ್ಳುಗರನು, ಸತ್ವ ಹೀನರನ್ನು, ದ್ರೋಣ ಪರ್ವ,2,30
 774.		ಹೊಳ್ಳುಗಳೆ, ವ್ಯರ್ಥವೆಂದು ತಿರಸ್ಕರಿಸು, ಕರ್ಣ ಪರ್ವ,5,2
 775.		ಹೊಳ್ಳುಗಳೆ, ಕಡೆಗಣಿಸು, ಆದಿ ಪರ್ವ,14,13
 776.		ಹೊಳ್ಳುವಾರು, ಅಪ್ರಯೋಜಕ, ಕರ್ಣ ಪರ್ವ,25,16
 777.		ಹೋತು+ತರಿಹಿಗಳು, ಹೋತಗಳನ್ನು ಬಲಿಕೊಡುವವರು, ಕರ್ಣ ಪರ್ವ,22,25
 778.		ಹೋದರು, ನಾಶಹೊಂದಿದರು, ಗದಾ ಪರ್ವ,11,43
 779.		ಹೋರಟಿ, ಹೋರಾಟ/ಕಾದಾಟ, ಉದ್ಯೋಗ ಪರ್ವ,3,75
 780.		ಹೋರಬೇಕೇ, ಯುದ್ಧ ಮಾಡಬೇಕೇ ? ಆರಯಿದು, ಭೀಷ್ಮ ಪರ್ವ,8,35
 781.		ಹೋರಿ, ಪ್ರಯತ್ನಿಸಿ, ಆದಿ ಪರ್ವ,14,0
 782.		ಹೋರಿಕೆ, ಹೋರಾಟ, ಗದಾ ಪರ್ವ,1,64
 783.		ಹೋರಿದು, ಹೋರಾಡಿ, ದ್ರೋಣ ಪರ್ವ,3,37
 784.		ಹೋರಿಸು, ಹೆಣಗಿಸು, ಆದಿ ಪರ್ವ,8,62
 785.		ಹೋರು, ವಿರೋಧ, ಕರ್ಣ ಪರ್ವ,26,37
 786.		ಹೋರುಗಳೆ, ಸೀಳುವುದು, ಶಲ್ಯ ಪರ್ವ,3,38
 787.		ಹೋರೆಗ, ಜ್ಯೋತಿಷಿ , ಆದಿ ಪರ್ವ,13,5
 788.		ಹೋಲ, ಹೊಲಿಕೆ, ಕರ್ಣ ಪರ್ವ,4,31
 789.		ಹೋಲುವಿಕೆಯಿಂಬಿಡಿಯಲಾರದೆ, ಹೋಲುವಿಕೆಯ + ಇಂಬು ಇಡಿಯಲಾರದೆ , ವಿರಾಟ ಪರ್ವ,4,1
 790.		ಹೋಳುಗಳೆವೆ, ಹೋಳು ಮಾಡು, ದ್ರೋಣ ಪರ್ವ,10,31
 791.		ಅಸಮಸೆಗೆ-, ಅಡ್ಡಾದಿಡ್ಡಿಗೆ, ಸಭಾ ಪರ್ವ,2,105
 792.		ದಿಷ್ಟಿವಾಳ, ಸೂಕ್ಷ್ಮ ನೋಟವುಳ್ಳ ಗುರಿಕಾರರು, ಸಭಾ ಪರ್ವ,2,105
 793.		ಹಾರುವಿಕೆ, ಬ್ರಾಹ್ಮಣಿಕೆ, ಆದಿ ಪರ್ವ,15,36
ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ

ವರ್ಗ:ಕನ್ನಡ ಸಾಹಿತ್ಯ